ಮಳೆಗೆ ಸೊಗಸಾಗಿದೆ ಮಡಿಕೇರಿಯ ರಾಜಾಸೀಟ್, ಈಗ ಆನೆಯೂ ಇದೆ…!

June 19, 2019
8:00 AM

ಮಡಿಕೇರಿ :  ಮಳೆಗೆ ಮಂಜಿನ ನಗರಿ ಸೊಗಸಾಗಿದೆ. ಮಂಜು ಓಡುತ್ತಾ ಬರುತ್ತಿದೆ… ಹಾಗೆಯೇ ಸುತ್ತಿಕೊಳ್ಳುತ್ತಿದೆ…. ಕೊಂಚ ಹೊತ್ತಲ್ಲಿ  ಮರೆಯಾಗುತ್ತಿದೆ.. ಈ ದೃಶ್ಯ ವೈಭವ ಕಾಣುವುದು  ಮಡಿಕೇರಿಯ ರಾಜಾಸೀಟಿನಲ್ಲಿ. ಇದೀಗ ಈ ಅಂದಕ್ಕೆ ಮತ್ತಷ್ಟು ಆಕರ್ಷಣೆ ನೀಡಲು ಆನೆಯೂ ಬಂದಿದೆ..!.

ಮಡಿಕೇರಿ ನಗರದ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನ ಈಗ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ. ವನ್ಯಜೀವಿಗಳ ಬೃಹತ್ ಕಲಾಕೃತಿಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.  ಎತ್ತರದ ಆನೆ ಕಲಾಕೃತಿ ಹೆಚ್ಚು ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತದ ಆಸಕ್ತಿಯಿಂದಾಗಿ ರಾಜಾಸೀಟಿಗೆ ಹೆಚ್ಚು ಮೆರುಗು ಬಂದಿದೆ ಎಂದು ಸ್ಥಳೀಯ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಸುಮಾರು 18 ಲಕ್ಷ ರೂ. ವೆಚ್ಚದ ಕಲಾಕೃತಿಗಳನ್ನು ಪುಣೆಯಿಂದ ತರಲಾಗಿದ್ದು, ನವಿಲು, ಜಿಂಕೆ, ಮೊಲ, ಹುಲಿ, ಜಿರಾಫೆ, ಆನೆ ಹಾಗೂ ಇನ್ನಿತರ ಕಲಾಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಪ್ರವಾಸಿಗರು ಕುಳಿತುಕೊಳ್ಳಲು ಆಕರ್ಷಕ ಕಲ್ಲುಬೆಂಚು ಅಳವಡಿಸಲಾಗುವುದು ಮತ್ತು ವೀಕ್ಷಣಾ ಗೋಪುರವನ್ನು ಮತ್ತಷ್ಟು ಅಂದಗಾಣಿಸಲಾಗುತ್ತಿದೆ.

ಇದೀಗ ಮಳೆಯೂ ಹೆಚ್ಚಾಗಿದ್ದು ಮಂಜಿನ ಓಟದ ದೃಶ್ಯವು ಮನ ತಣಿಸುತ್ತದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭತ್ತದ ಗದ್ದೆಯಿಂದ ಅಡಿಕೆ ತೋಟ | ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬಿಚ್ಚಿಟ್ಟ ಸಂಶೋಧನೆ
March 9, 2026
10:09 PM
by: ದ ರೂರಲ್ ಮಿರರ್.ಕಾಂ
ರೈತರಿಂದ ಉದ್ಯಮಿಗಳವರೆಗೆ : ಕೃಷಿ ಕ್ಷೇತ್ರಕ್ಕೆ ಸರ್ಕಾರದ ಹೊಸ ದೃಷ್ಟಿಕೋನ
March 9, 2026
7:00 AM
by: ದ ರೂರಲ್ ಮಿರರ್.ಕಾಂ
ಎಲೆಚುಕ್ಕಿ ರೋಗದಿಂದ ಅಡಿಕೆ ರೈತರಿಗೆ ಸಂಕಷ್ಟ | ಸಾಲ ಮರುಪಾವತಿ ಒಂದು ವರ್ಷ ಮುಂದೂಡುವ ಪ್ರಸ್ತಾವನೆ..!
March 9, 2026
6:34 AM
by: ದ ರೂರಲ್ ಮಿರರ್.ಕಾಂ
ಕೃಷಿಯ ನಿಜವಾದ ಶಕ್ತಿ ಮಹಿಳೆಯರು : ಭಾರತದಲ್ಲಿ ಮೌನ ಕ್ರಾಂತಿ ಶುರುವಾಗಿದೆ..!
March 8, 2026
8:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror