ಮಾಡಾವು 110 ಕೆವಿ ವಿದ್ಯುತ್ ಸಬ್ ಸ್ಟೇಶನ್ | ಮೇ.16 ಪ್ರಾಯೋಗಿಕ ಚಾಲನೆಗೆ ಸಿದ್ಧತೆ |

May 15, 2020
2:50 PM

ಸುಳ್ಯ: ಅಂತೂ ಕೊನೆಗೂ 14 ವರ್ಷಗಳ ಹಿಂದೆ ರೂಪುಗೊಂಡ ಯೋಜನೆಯೊಂದು ಪ್ರಾಯೋಗಿಕವಾಗಿ ಚಾಲನೆಗೆ ಸಿದ್ಧವಾಗಿದೆ. ಇದು ವಿದ್ಯುತ್ ಬಳಕೆದಾರರಿಗೆ ಬಹುದೊಡ್ಡ ಕೊಡುಗೆ..!.

ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಕಲೆದ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿತ್ತು. ಆದರೆ ಕುಂಟುನೆಪ ಮುಂದುವರಿದಿತ್ತು. ಇದೀಗ ಮೇ.16 ರಂದು ಪ್ರಾಯೋಗಿಕ ಚಾಲನೆಗೆ ಸಿದ್ಧತೆ ನಡೆಯುತ್ತಿದೆ. ಬೆಳ್ಳಾರೆ ವಿದ್ಯುತ್ ಬಳಕೆದಾರರ ವೇದಿಕೆ 14 ವರ್ಷಗಳ ಹಿಂದೆ ರೂಪುಗೊಂಡ ಯೋಜನೆ ಶೀಘ್ರವಾಗಿ ಮುಕ್ತಾಯಗೊಳ್ಳಲು ಕಳೆದ  ಒಂದು ವರ್ಷಗಳಿಂದ ನಿರಂತರ ಹೋರಾಟ ಮಾಡಿತ್ತು, ಅಗತ್ಯವಾಗಿ ಆಗಬೇಕಾದ ಕೆಲಸಗಳ ಕಡೆಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದು ಸುಲಲಿತವಾಗುವಂತೆ ಮಾಡಿತ್ತು.

ಕಳೆದ ಒಂದು ವರ್ಷಗಳಿಂದ ವೇಗ ಪಡೆದ ಮಾಡಾವು 110 ಕೆವಿ ಸಬ್ ಸ್ಟೇಶನ್ ಇನ್ನೂ ಉದ್ಘಾಟನೆಗೆ ಕಾಯುತ್ತಿರುವುದರ ಬಗ್ಗೆ ಹಾಗೂ  ವರ್ಷಗಳಿಂದ ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಅವರ ನೇತೃತ್ವದಲ್ಲಿ  ನಡೆದ ಹೋರಾಟ ಹಾಗೂ  ಫಾಲೋಅಪ್ ಬಗ್ಗೆ ಸುಳ್ಯನ್ಯೂಸ್.ಕಾಂ ಸಮಗ್ರ ವರದಿ ಮಾಡಿತ್ತು.

ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಅವರ ನೇತೃತ್ವದ  ಹೋರಾಟಕ್ಕೆ ಕೃಷಿಕರು,  ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ ಗ್ರಾಮ ಪಂಚಾಯತ್ ಗಳು, ಇನ್ನಿತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದವು.

 

110 ಕೆವಿ ಲೈನ್ ನಿರ್ಮಾಣಕ್ಕೆ ಅರಣ್ಯ ಅನುಮತಿ : ಅಂಗಾರ

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ
April 17, 2026
1:55 PM
by: ಸಾಯಿಶೇಖರ್ ಕರಿಕಳ
ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ
April 16, 2026
7:25 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ
April 16, 2026
7:06 AM
by: ಮಿರರ್‌ ಡೆಸ್ಕ್
ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’
April 15, 2026
10:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror