ಮಾದರಿಯಾಯ್ತು ಶ್ರೀ ಭಗವಾನ್ ಸಂಘದ ಕಾರ್ಯ: “ಸೇವೆ” ಮುಂದೆ ಬಂದಾಗ ಉಳಿದೆಲ್ಲವೂ ದೂರವಾಯ್ತು ಇಲ್ಲಿ

June 21, 2019
11:13 PM

ಅರಂತೋಡು: ಮಡಿಕೇರಿ ತಾಲೂಕು ಚೆಂಬುಗ್ರಾಮದ ಊರುಬೈಲು ನಿವಾಸಿ ಹರಿಜನ ಗುರುವ ಅವರ ಪತ್ನಿ 65 ವರ್ಷ ವಯಸ್ಸಿನ ಬೆಳ್ಳಚ್ಚಿ  ಗುರುವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಮರುದಿನ ಬೆಳಿಗ್ಗೆ 10 ಗಂಟೆಯಾದರೂ ಮೃತರ ಕುಟುಂಬದವರಾಗಲೀ,ಬಂಧುಗಳಾಗಲಿ ಯಾರೂ ಕೂಡ ಅಂತ್ಯಸಂಸ್ಕಾರ ಕಾರ್ಯಗಳಿಗೆ ಸ್ಪಂದಿಸದೆ ಪಾರ್ಥಿವ ಶರೀರ ಅನಾಥವಾಗಿ ಉಳಿಯಿತು.

ಈ ಪರಿಸ್ಥಿತಿ ಮನಗಂಡ ಪಯಸ್ವಿನಿ ಕೃ ಪ ಸ ಸಂಘದ ಅಧ್ಯಕ್ಷರಾದ  ಅನಂತ್.ಯನ್.ಸಿ ಅವರು ತಮ್ಮ ಸಮಾಜ ಸೇವಾ ಸಂಘಟನೆಯಾದ ಶ್ರೀ ಭಗವಾನ್ ಸಂಘದ ಸ್ವಯಂಸೇವಕರು ಮತ್ತು ಕೆಲವು ಯುವಕರನ್ನು ಸೇರಿಸಿಕೊಂಡು ಅಂತ್ಯಸಂಸ್ಕಾರ ಕೈಗೊಳ್ಳಲು ನಿರ್ಧರಿಸಿದರು.

ಮಳೆಯನ್ನು ಲೆಕ್ಕಿಸದೆ, ಸಂಘದ ವೆಚ್ಚದಲ್ಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಅಂತ್ಯಸಂಸ್ಕಾರ ಮಾಡಿದ್ದಲ್ಲದೆ,ಜಾತಿಭೇದವಿಲ್ಲದೆ,ಸ್ವತಃ ನಿರ್ಗತಿಕ ವೃದ್ದೆ ದಲಿತ ಮಹಿಳೆಯ ಶವಯಾತ್ರೆಗೆ ಹೆಗಲು ಕೊಟ್ಟು ಮಾನವೀಯತೆ ಮೆರೆದರು. ನೊಂದವರಿಗೆ ನೆರವಾಗುವ ಹೃದಯ ವೈಶಾಲತೆ ಮೆರೆದ ಸಂಘದ ಸದಸ್ಯರು ಜನರ ಮೆಚ್ಚುಗೆಗೆ ಪಾತ್ರರಾದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ
ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ
September 5, 2026
7:20 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?
September 5, 2026
1:37 PM
by: ಸಾಯಿಶೇಖರ್ ಕರಿಕಳ
ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror