ಮುಂದುವರಿದ ಸಹಕಾರಿಗಳ ರಾಜಿನಾಮೆ

Advertisement

ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನದ ಬಳಿಕ ಸಂಘಪರಿವಾರ, ಸಹಕಾರ ಭಾರತಿ ಹಾಗೂ ಬಿಜೆಪಿ ಸೂಚನೆಯಂತೆ ಮತದಾನದಲ್ಲಿ ಭಾಗವಹಿಸಿದ  ಎಲ್ಲರೂ ರಾಜೀನಾಮೆ ನೀಡಲು ತಿಳಿಸಲಾಗಿತ್ತು. ಇದೀಗ ರಾಜಿನಾಮೆ ಪರ್ವ ಆರಂಭವಾಗಿದ್ದು ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಅಧ್ಯಕ್ಷ , ತಾಲೂಕು ಸಹಕಾರ ಭಾರತಿ ಅಧ್ಯಕ್ಷ ವಿಷ್ಣು ಭಟ್ ರಾಜಿನಾಮೆ ನೀಡಿದ್ದಾರೆ.

Advertisement

ಸಂಘದ ಸಭೆ ಕರೆದ ಬಳಿಕ ರಾಜಿನಾಮೆ ನಿರ್ಧಾರ ಘೋಷಿಸಿದ್ದಾರೆ. ಇದಕ್ಕೆ ಸಂಘದ ನಿರ್ದೇಶಕರು ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ತಿಳಿದುಬಂದಿದೆ. ಸಂಘದ ಸದಸ್ಯರ ಹಿತದೃಷ್ಠಿಯಿಂದ ಸಹಕಾರಿ ಸಂಘದ ಅಧ್ಯಕ್ಷರು ಸಾಲ ಮರುಪಾವತಿ ಹಾಗೂ ಸಾಲ ಮಂಜೂರಾತಿ ಸಂದರ್ಭ ಅಗತ್ಯವಾಗಿದೆ. ಆದರೆ ಈ ಸಂದರ್ಭ ಅಧ್ಯಕ್ಷರು ರಾಜಿನಾಮೆ ನೀಡಿದರೆ ಸದಸ್ಯರಿಗೆ ಸಮಸ್ಯೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

Advertisement
Advertisement

ಈ ನಡುವೆ ಕಾಣಿಯೂರು ಸೇರಿದಂತೆ ಸುಳ್ಯ ಬಿಜೆಪಿ ಮಂಡಲ ವ್ಯಾಪ್ತಿಯ ಸಹಕಾರಿ ಸಂಘದಿಂದಲೂ ಚುನಾವಣೆಯಲ್ಲಿ ಭಾಗವಹಿಸಿದವರು ರಾಜೀನಾಮೆ ನೀಡುತ್ತಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮುಂದುವರಿದ ಸಹಕಾರಿಗಳ ರಾಜಿನಾಮೆ"

Leave a comment

Your email address will not be published.


*