ಸುಬ್ರಹ್ಮಣ್ಯ: ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ.) ಆಲಂಕಾರು ಇದರ ನೂತನ ನೆಟ್ಟಣ ಶಾಖೆಯ ಪ್ರಾರಂಭದ ಬಗ್ಗೆ ಶಾಖಾ ಸಲಹಾ ಸಮಿತಿಯ ರಚನಾ ಸಭೆಯು ಉದ್ದೇಶಿತ ಶಾಖಾ ಕಚೇರಿಯ ಆವರಣದಲ್ಲಿ ನಡೆಯಿತು.ನೆಟ್ಟಣ ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಸಮಾಜ ಸೇವಕ ಹಾಗೂ ಜೇಸಿಸ್ ವಲಯಾಧಿಕಾರಿ ರವಿ ಕಕ್ಕೆಪದವು ಅವಿರೋಧವಾಗಿ ಆಯ್ಕೆಯಾದರು.
ಕುಮಾರಿ ವಾಸುದೇವನ್(ಉಪಾಧ್ಯಕ್ಷೆ), ಸುಂದರ ಕರ್ಕೇರ ಮತ್ರಾಡಿ(ಕಾರ್ಯದರ್ಶಿ) ನೇಮಕಗೊಂಡರು. ಸತೀಶ್ ಮರ್ಧಾಳ, ಕೃಷ್ಣಪ್ಪ ಪೂಜಾರಿ ಕೊಂಬಾರು, ಉದಯ ಕುಮಾರ್ ಬಿಳಿನೆಲೆ, ಮಾಯಿಲಪ್ಪ ಪೂಜಾರಿ ಕೊಂಬಾರು,ಸಂತೋಷ್ ಕುಮಾರ್ ಬಿಳಿನೆಲೆ, ಮೋನಪ್ಪ ಪೂಜಾರಿ ಕೆರ್ಮಾಯಿ( ಸದಸ್ಯರು) ನೇಮಕಗೊಂಡರು.
ಈ ಸಂದರ್ಭದಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು, ಉಪಾಧ್ಯಕ್ಷ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ನಿರ್ದೇಶಕರುಗಳಾದ ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಜಿನ್ನಪ್ಪ ಸಾಲ್ಯಾನ್ ಕಡಬ, ರವಿ ಪೂಜಾರಿ ಕುಂಞಲಡ್ಕ, ತೇಜಕುಮಾರ್ ಅಗರಿಕಜೆ ಸುಬ್ರಹ್ಮಣ್ಯ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿ, ಸಿಬ್ಬಂದಿ ಅಜಯ್ ಕುಮಾರ್ ನೆಟ್ಟಣ ಉಪಸ್ಥಿತರಿದ್ದರು.