ಮೇ 27  ರಿಂದ ಗೋವಾದಲ್ಲಿ  ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

Advertisement

ಮಂಗಳೂರು: ಹಿಂದುತ್ವನಿಷ್ಠ ಸಂಘಟನೆಗಳ ರಾಷ್ಟ್ರವ್ಯಾಪಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಮೇ 27 ರಿಂದ ಜೂನ್ 8 ರವರೆಗೆ  ಗೋವಾದಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರಕಟಣೆ ತಿಳಿಸಿದೆ.

Advertisement

ಈ ಅಧಿವೇಶನಕ್ಕೆ ಭಾರತದ 26 ರಾಜ್ಯಗಳ ಸಹಿತ ಬಾಂಗ್ಲಾದೇಶದಿಂದ ಒಟ್ಟು 200 ಕ್ಕಿಂತ ಅಧಿಕ ಹಿಂದೂ ಸಂಘಟನೆಗಳ 800 ಕ್ಕಿಂತ ಹೆಚ್ಚು ಹಿಂದುತ್ವನಿಷ್ಠರು ಭಾಗವಹಿಸಲಿದ್ದಾರೆ. ಅಧಿವೇಶನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಇಂದ 12 ಹಿಂದುತ್ವವಾದಿ, ನ್ಯಾಯವಾದಿ, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಈ ಎಲ್ಲ  ಸಂಘಟನೆಗಳ ಪದಾಧಿಕಾರಿಗಳು ಒಟ್ಟಾಗಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಮಾನಕೃತಿಯ ನೀಲನಕ್ಷೆಗನುಸಾರ ವರ್ಷವಿಡೀ ಉಪಕ್ರಮ ಮತ್ತು ಆಂದೋಲನದ ದಿಕ್ಕನ್ನು ನಿರ್ಧರಿಸಲಾಗುವುದು ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯು  ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

Advertisement
Advertisement

 ಕೇಂದ್ರದಲ್ಲಿ  ಹೊಸ ಸರಕಾರದ ಸ್ಥಾಪನೆಯ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿ, ಸಮಾನ ನಾಗರಿಕ ಕಾನೂನು, ಕಲಂ 320 ರದ್ದು ಮಾಡುವುದು, ಗೋ ಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪುನರ್ ನಿರ್ಮಾಣ ಇತ್ಯಾದಿ ಹಿಂದೂಗಳ ಕಳೆದ ಅನೇಕ ವರ್ಷಗಳಿಂದ ನೆನೆಗುದಿಯಲ್ಲಿದ್ದ  ಸಮಸ್ಯೆಗಳ ಮೇಲೆ ವಿಚಾರ ವಿನಿಮಯ ಮಾಡಿ ಸರಕಾರಕ್ಕೆ ನಿರ್ದಿಷ್ಟ ಕ್ರಮಕೈಗೊಳ್ಳುವ ದೃಷ್ಟಿಯಿಂದ ಸಂಘಟನಾತ್ಮಕ ಪ್ರಯತ್ನಗಳ ದೃಢನಿರ್ಧಾರವನ್ನು ಈ ಅಧಿವೇಶನದ ಮೂಲಕ ಮಾಡಲಾಗುವುದು. ಇದರೊಂದಿಗೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದ ಹಿಂದೂಗಳ ರಕ್ಷಣೆಯ ಸಂದರ್ಭದಲ್ಲಿಯೂ ಚರ್ಚಿಸಲಾಗುವುದು ಎಂದು ಪ್ರಕಟಣೆಯಲ್ಲಿ  ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರ  ಚಂದ್ರ ಮೊಗೇರ ತಿಳಿಸಿದ್ದಾರೆ.

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮೇ 27  ರಿಂದ ಗೋವಾದಲ್ಲಿ  ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ"

Leave a comment

Your email address will not be published.


*