ಮಂಗಳೂರು: ರಮ್ಜಾನ್ ತಿಂಗಳ ಚಂದ್ರ ದರ್ಶನ ಭಾನುವಾರ ಆಗಿರುವುದರಿಂದ ಮೇ 6 ರಿಂದ ಮುಸ್ಲಿಮರು ಒಂದು ತಿಂಗಳ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯರ್ ಘೋಷಿಸಿದ್ದಾರೆ.
ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ಉಪವಾಸದಿಂದ ಸಾಧ್ಯವಾಗಲಿ. ರಮ್ಜಾನ್ ಎಂಬುದು ಹಸಿವು, ದಾಹ, ಭಾವನೆಗಳನ್ನು ಅರಿತುಕೊಳ್ಳುವ ತಿಂಗಳಾಗಿದ್ದು, ಮಾನವ ಸೌಹಾರ್ದತೆ ಮತ್ತು ಧರ್ಮಸಹಿಷ್ಣುತೆಗೆ ಈ ತಿಂಗಳು ಒತ್ತು ನೀಡುತ್ತದೆ. ಈ ತಿಂಗಳಲ್ಲಿ ಉಪವಾಸಿಯಾಗುವ ಮೂಲಕ ಮುಸ್ಲಿಮರು ಸ್ವಧರ್ಮವನ್ನು ಅರಿತುಕೊಳ್ಳಲು ಮತ್ತು ಇತರ ಧರ್ಮೀಯರೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸಲು ಪ್ರಯತ್ನಿಸಬೇಕು. ರಂಜಾನ್ ಸ್ವಶುದ್ಧೀಕರಣದ ತಿಂಗಳು. ನೈತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣಗೊಳ್ಳುವ ತಿಂಗಳಾಗಿ ಮುಸ್ಲಿಮರು ಈ ತಿಂಗಳನ್ನು ಸ್ವೀಕರಿಸಲಿ. ನಾಡಿನ ಸಮಸ್ತರಿಗೆ ರಂಜಾನ್ ಶುಭಾಶಯಗಳು ಎಂದು ಖಾಝಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.6 ರಿಂದ ರಮ್ಜಾನ್ ಉಪವಾಸ ಆರಂಭ"