ಸುಳ್ಯ: ಸ್ವಚ್ಛ ರಾಜ ಮಾರ್ಗ ಕಲ್ಪನೆಯಡಿ ಯುವಬ್ರಿಗೇಡ್ ಸುಳ್ಯ ವತಿಯಿಂದ ರಸ್ತೆ ಬದಿ ಸ್ವಚ್ಛತಾ ಆಂದೋಲನವನ್ನು ನಡೆಸಲಾಯಿತು.
ಉಬರಡ್ಕ ಕ್ರಾಸ್ ನ ವಿಷ್ಣು ವೃತ್ತ ದಿಂದ ಪರಿವಾರ ಕಾನ ವರೆಗೆ ರಾಜ್ಯ ಹೆದ್ದಾರಿಯ ಬದಿಗಳಲ್ಲಿ ಸ್ವಚ್ಛತಾ ಆಂದೋಲನ ನಡೆಯಿತು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ನ 30 ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು
ಮತ್ತು ಈ ಸಂದರ್ಭದಲ್ಲಿ ಪದ್ಮ ಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಮತ್ತಿತರರು ಕೈ ಜೋಡಿಸಿದ್ದರು.
ಸ್ವಚ್ಛತೆಯ ಸಮಯದಲ್ಲಿ ಪ್ಲಾಸ್ಟಿಕ್, ಕೋಳಿ ಯ ಕೊಳೆತ ತ್ಯಾಜ್ಯ, ಕೊಳೆತ ತರಕಾರಿ ಸೇರಿದಂತೆ ಮೂರು ಲೋಡ್ ತ್ಯಜ್ಯ, ಸುಮಾರು 1000 ಮದ್ಯ ದ ಬಾಟಲಿ ಗಳನ್ನು ಸಂಗ್ರಹಿಸಲಾಯಿತು. ಯುವಾ ಬ್ರಿಗೇಡ್ ಮತ್ತು ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಕರ್ತರು ಕೈ ಜೋಡಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಯುವಬ್ರಿಗೇಡ್ ಸುಳ್ಯ ವತಿಯಿಂದ ಸ್ವಚ್ಛತಾ ಆಂದೋಲನ"