ಉಜಿರೆ: ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆ ಎಕ್ಸ್ ಪೀರಿಯಾ– 2019

November 30, 2019
3:08 PM

ಉಜಿರೆ: ಮನದಲ್ಲಿ ಮೂಡಿದ ಯೋಚನೆಗಳಿಗೆ, ಯೋಜನೆಗಳಿಗೆ ಮೂರ್ತರೂಪ ನೀಡಿ ಪ್ರಾಯೋಗಿಕವಾಗಿ ಪರೀಕ್ಷೆಗೊಳಪಡಿಸಿ ತಜ್ಞರಿಂದ ಅರ್ಹತೆ ಮತ್ತು ಬಳಕೆ ಬಗ್ಗೆ ಅಧಿಕೃತ ಪ್ರಮಾಣಪತ್ರ ಪಡೆದಾಗ ಮಾತ್ರ ತಯಾರಿಸಿದ ಮಾದರಿಗಳು ಸಮಾಜಕ್ಕೆ ಉಪಯುಕ್ತವಾಗುತ್ತವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪ್ರಾಧ್ಯಾಪಕ ಡಾ. ಎನ್. ಎಸ್. ದಿನೇಶ್ ಹೇಳಿದರು.

Advertisement

ಅವರು ಉಜಿರೆಯ ಎಸ್.ಡಿ.ಎಂ. ಎಂಜಿನಿಯರಿಂಗ್‍ ಕಾಲೇಜಿನಲ್ಲಿ “ಸಂಶೋಧನೆ ಮಾಡಿ, ಅನುಭವಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ ರಾಜ್ಯಮಟ್ಟದ ವಿಜ್ಞಾನ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಹೊಸ ಚಿಂತನೆಗಳೊಂದಿಗೆ ಸಮಾಜಕ್ಕೆ ಹಾಗೂ ದೇಶಕ್ಕೆ ಉಪಯುಕ್ತವಾದ ಸಂಶೋಧನೆಗಳನ್ನು ನಡೆಸಬೇಕು. ಸಾಮಾನ್ಯವಾಗಿ ವಿಜ್ಞಾನ, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ನಮಗೆ ಬೇಕಾದ ಉಪಕರಣಗಳನ್ನು ನಾವು ವಿದೇಶಗಳಿಂದ ತರಿಸುತ್ತೇವೆ. ನಮ್ಮ ವಿಶಿಷ್ಟ ಯೋಚನೆ, ಯೋಜನೆಗಳಿಂದ ನಮಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳನ್ನು ನಾವೇ ತಯಾರಿಸಿ ಸ್ವಾವಲಂಬಿಗಳಾಗಬೇಕು ಎಂದು ಅವರು ಸಲಹೆ ನೀಡಿದರು. ಮನದಲ್ಲಿ ಮೂಡಿದ ಕಲ್ಪನೆಗೆ ನಾವು ಮೂರ್ತರೂಪ ನೀಡಿ, ಸಂಶೋಧನೆ ಹಾಗೂ ವಿಶ್ಲೇಷಣೆ ನಡೆಸಿ, ಪ್ರಾಯೋಗಿಕವಾಗಿ ಅದರ ಬಳಕೆ ಮತ್ತು ಉಪಯುಕ್ತತೆ ಬಗ್ಗೆ ತಜ್ಞರಿಂದ ಅಧಿಕೃತ ಪ್ರಮಾಣ ಪತ್ರ ಪಡೆದು ನಂತರ ಅದರ ಉತ್ಪಾದನೆಗೆ ನಾವು ಸಜ್ಜಾಗಬೇಕು. ಈ ಹಂತದಲ್ಲಿ ನಾವು ಅನೇಕ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಕಲ್ಪನೆಗೂ, ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ಬೇಕಾದ ಉಪಕರಣಗಳನ್ನು, ಉತ್ಪನ್ನಗಳನ್ನು ನಾವೇ ತಯಾರಿಸಿ ಸ್ವಾವಲಂಬನೆ ಸಾಧಿಸಬೇಕು. ಇದಕ್ಕಾಗಿ ವಿದೇಶಗಳ ಪರಾವಲಂಬನೆ ಸಲ್ಲದು ಎಂದು ಅವರು ಸಲಹೆ ನೀಡಿದರು. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿವಿಧ ವಿಭಾಗಗಳು ಸಮನ್ವಯತೆಯಿಂದ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ವಿವಿಧ ವಿಭಾಗಗಳ ಮಧ್ಯೆ ಬೇಧ, ಭಿನ್ನಾಭಿಪ್ರಾಯ ಸಲ್ಲದು ಎಂದು ಅವರು ಕಿವಿಮಾತು ಹೇಳಿದರು.

ಎಸ್.ಡಿ.ಎಂ. ಎಂಜಿನಿಯರಿಂಗ್‍ ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್‍ಕುಮಾರ್. ಟಿ ಸ್ವಾಗತಿಸಿದರು. ವಿಜ್ಞಾನ ಮೇಳದ ಸಂಯೋಜಕಡಾ. ಶಂಸುದ್ದೀನ್ ಉಪಸ್ಥಿತರಿದ್ದರು.
ಡಾ. ರಜತಾ.ಪಿ. ಧನ್ಯವಾದವಿತ್ತರು. ಕೇವಲ್ ಎಂ. ಜೈನ್‍ ಕಾರ್ಯಕ್ರಮ ನಿರ್ವಹಿಸಿದರು.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ
July 3, 2025
7:00 AM
by: ದ ರೂರಲ್ ಮಿರರ್.ಕಾಂ
ಒಂದು ಸೇತುವೆಯ ಹೋರಾಟದ ಕತೆ | ಕೊನೆಗೂ ಕೈಗೂಡಿತು ಬೃಹತ್‌ ಸೇತುವೆ | ಅದು ಅಂಬಾರಗೂಡ್ಲು-ಕಳಸವಳ್ಳಿ ಸೇತುವೆ |
July 3, 2025
12:24 AM
by: The Rural Mirror ಸುದ್ದಿಜಾಲ
ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮ
July 3, 2025
12:10 AM
by: The Rural Mirror ಸುದ್ದಿಜಾಲ
ಕೊಟ್ಟಿಯೂರ್‌ ದೇವಸ್ಥಾನ | ದಿಢೀರ್‌ ಗಮನ ಸೆಳೆದ ಶಿವಕ್ಷೇತ್ರದ ವಿಶೇಷ ಏನು..?
July 3, 2025
12:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group