ಸುಳ್ಯ: ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಶಿಯಲ್ ಆರ್ಟ್ಸ್ ಅಧೀನದಲ್ಲಿ ಆಲ್ ಇಂಡಿಯಾ ಶಿಟೋರ‌್ಯು ಕರಾಟೆ ಡು ಯೂನಿಯನ್ ವತಿಯಿಂದ ಹಂಪನಕಟ್ಟೆಯ ಮಿಲಾಗ್ರಿಸ್ ಸಿಬಿಎಸ್ಇ ಶಾಲೆಯಲ್ಲಿ ನ.16,17 ರಂದು ನಡೆದ 12 ನೆಯ ವರ್ಷದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಫರ್ದೆಯಲ್ಲಿ ಸುಳ್ಯ ಐಪಿಎಸ್ ಶಾಲೆಯ ಎಂಟನೆಯ ತರಗತಿಯ ವಿದ್ಯಾರ್ಥಿ ಅಹ್ಮದ್ ಖಲೀಲ್ ಇಂಡಿವಿಜುವಲ್ ಕುಮಿಟಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಇಂಡಿವಿಜುವಲ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ.
ಈತ ಮೂರು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಷಿಪ್ ಸ್ಫರ್ದೆಯಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತನಾಗಿರುವ ವಿದ್ಯಾರ್ಥಿಯಾಗಿರುತ್ತಾನೆ.
ಈತ ಸುಳ್ಯದಲ್ಲಿ ಉದ್ಯಮಿಯಾಗಿರುವ ಎಂ ಎಂ ಟ್ರೇಡರ್ಸ್ ಮಾಲಕ ಮಜೀದ್ ನಾವೂರು ಮತ್ತು ಸೈನಾ ದಂಪತಿಗಳ ಪುತ್ರ. ಕರಾಟೆ ಮಾಸ್ಟರ್ ಚಂದ್ರಶೇಖರ್ ಕನಕಮಜಲುರವರ ಶಿಷ್ಯ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel