ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

April 4, 2026
8:44 AM
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ ಅಥವಾ ಅನ್ನದ ಜೊತೆ ಅತ್ಯುತ್ತಮ ಕಾಂಬಿನೇಶನ್.

ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದು ವಿಶೇಷ ಸ್ಥಾನ ಹೊಂದಿರುವ ಗುಜ್ಜೆ-ಕಡಲೆ ಗಸಿ ರುಚಿಕರ ಹಾಗೂ ಪೌಷ್ಟಿಕ ಆಹಾರ.
ಚಪಾತಿ, ಅನ್ನ ಅಥವಾ ರೋಟಿಯ ಜೊತೆ ಇದು ಸೂಪರ್ ಕಾಂಬಿನೇಶನ್.

ಬೇಕಾಗುವ ಸಾಮಗ್ರಿಗಳು :

  • ಗುಜ್ಜೆ – 1 ಕಪ್ (ಚಿಕ್ಕದಾಗಿ ಕತ್ತರಿಸಿ ನೀರಿನಲ್ಲಿ ಇಟ್ಟುಕೊಳ್ಳಿ)
  • ಕಡಲೆ – 1/4 ಕಪ್ (ನೆನೆಸಿ)
  • ಕೆಂಪು ಮೆಣಸು – 2
  • ಜೀರಿಗೆ – 1 ಚಮಚ
  • ಕೊತ್ತಂಬರಿ ಬೀಜ – 1 ಚಮಚ
  • ಉದ್ದಿನ ಬೇಳೆ – 1/4 ಚಮಚ
  • ಕಾಯಿತುರಿ – 1/4 ಕಪ್

 ಒಗ್ಗರಣೆಗೆ:

  • ಸಾಸಿವೆ
  • ಎಣ್ಣೆ
  • ಕೆಂಪು ಮೆಣಸು
  • ಕರಿಬೇವಿನ ಸೊಪ್ಪು
  • ಬೆಳ್ಳುಳ್ಳಿ

ಮಾಡುವ ವಿಧಾನ :  ಮೊದಲು ಕಡಲೆ ಮತ್ತು ಗುಜ್ಜೆಯನ್ನು ಉಪ್ಪು, ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಕೆಂಪು ಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಉದ್ದಿನ ಬೇಳೆ, ಕಾಯಿತುರಿ ಹಾಕಿ ಫ್ರೈ ಮಾಡಿ,  ಫ್ರೈ ಮಾಡಿದ ಮಿಶ್ರಣವನ್ನು ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಬೇಯಿಸಿದ ಗುಜ್ಜೆ-ಕಡಲೆಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಸಾಸಿವೆ, ಎಣ್ಣೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಹಾಕಿ ಚಟಪಟಾಯಿಸಿ ಸೇರಿಸಿ.  ಬಿಸಿ ಬಿಸಿಯಾಗಿ ಸರ್ವ್ ಮಾಡಿ…

ವಿಶೇಷ ಟಿಪ್ಸ್

  • ಸ್ವಲ್ಪ ಕಾಯಿ ಹೆಚ್ಚು ಹಾಕಿದರೆ ರುಚಿ ಹೆಚ್ಚುತ್ತದೆ
  • ಬೆಳ್ಳುಳ್ಳಿ ಒಗ್ಗರಣೆ ಗಸಿಗೆ ವಿಶೇಷ ಸುವಾಸನೆ ನೀಡುತ್ತದೆ
  • ಅನ್ನ ಅಥವಾ ಚಪಾತಿ ಎರಡಕ್ಕೂ ಸೂಪರ್ ಕಾಂಬಿನೇಶನ್

Gujje Kadale Gasi is a traditional Karnataka curry made with breadfruit and soaked chana, blended with roasted coconut spices. It pairs perfectly with chapati or rice.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ
August 30, 2026
10:09 PM
by: ದ ರೂರಲ್ ಮಿರರ್.ಕಾಂ
ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror