ಲಂಡನ್ ಪ್ರತಿಷ್ಠಿತ ಎಫ್ಆರ್ ಸಿಆರ್ ಪರೀಕ್ಷೆಯಲ್ಲಿ ಡಾ|ರಾಮಕಿಶೋರ್ ಕಾನಾವು ತೇರ್ಗಡೆ

January 26, 2020
8:05 PM

ಸುಳ್ಯ : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ರೆಡಿಯೋಲಾಜಿಸ್ಟ್ ಆಗಿರುವ ಡಾ| ರಾಮಕಿಶೋರ್ ಕಾನಾವು ಅವರು ಲಂಡನ್‌ ಪ್ರತಿಷ್ಠಿತ ರಾಯಲ್ ಕಾಲೇಜು ಆಫ್ ರೆಡಿಯೋಲಾಜಿಸ್ಟ್ಸ್ ವೈದ್ಯಕೀಯ ಪರೀಕ್ಷೆಯಲ್ಲಿ (ಎಫ್ ಆರ್ ಸಿಆರ್ ಯುಕೆ) ಉತ್ತಮ ಅಂಕ ಪಡೆದು ತೇರ್ಗಡೆ ಹೊಂದಿ ಸಾಧನೆ ತೋರಿದ್ದಾರೆ.

Advertisement

ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಕಾನಾವು ಮತ್ತು ಅನಿತಾ ಟಿ.ಭಟ್ ಕಾನಾವು ಅವರ ಪುತ್ರನಾಗಿರುವ ಇವರು, ಮುಕ್ಕೂರು ಸ.ಹಿ.ಪ್ರಾ.ಶಾಲೆ, ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರ, ಅಳಿಕೆ ಸತ್ಯಸಾಯಿ ವಿದ್ಯಾಕೇಂದ್ರಗಳಲ್ಲಿ ಪ್ರಾಥಮಿಕ, ಪ್ರೌಢ, ಪಿಯು ಶಿಕ್ಷಣ ಪೂರೈಸಿ ಆ ಬಳಿಕ ಎಸ್ಎಸ್ ಮೆಡಿಕಲ್ ಕಾಲೇಜು ದಾವಣೆಗೆರೆಯಲ್ಲಿ ಎಂಬಿಬಿಎಸ್ ಪದವಿ ಪಡೆದರು. ಅನಂತರ ಅರ್ ಮೇನಿಯಾದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ) ಪಡೆದರು. ಪ್ರತಿಷ್ಠಿತ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ರೆಡಿಯೋಲಾಜಿಸ್ಟ್ ಆಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ರೆಡಿಯೋಲಾಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಪುತ್ತೂರು ಸಿಟಿ ಆಸ್ಪತ್ರೆ (ಪಿಸಿಎಚ್) ಇದರ ಪಾಲುದಾರರಾಗಿದ್ದಾರೆ.

ಪತ್ನಿ ಡಾ|ಅಂಬಿಕಾ ಕಾನಾವು ಅವರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

SSLC ಪಾಸ್ ಮಾಡಿದವರಿಗೆ ಸುವರ್ಣಾವಕಾಶ..! ಮಂಗಳೂರಿನ ಜಿಟಿಟಿಸಿಯಲ್ಲಿ 100% ಉದ್ಯೋಗಾಧಾರಿತ ಡಿಪ್ಲೊಮಾ
April 24, 2026
7:30 AM
by: ಮಿರರ್‌ ಡೆಸ್ಕ್
13 ಟನ್ ಅಕ್ರಮ ಅಡಿಕೆ ವಶ : ಕರಾವಳಿ ರಕ್ಷಣಾ ಪಡೆಯ ದಾಳಿ
April 24, 2026
7:24 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಬಿಸಿಲು ಬಿಸಿ ತೀವ್ರ : ಮೈಸೂರಿನಲ್ಲಿ ಸನ್ ಸ್ಟ್ರೋಕ್ ವಾರ್ಡ್ ಆರಂಭಿಸಿದ ಆಸ್ಪತ್ರೆ
April 23, 2026
3:10 PM
by: ಮಿರರ್‌ ಡೆಸ್ಕ್
ರೈತರು ಇಂಧನದಾತರಾಗಬೇಕು – ಭೂಮಿ ಉಳಿಸಿ ಸಮ್ಮೇಳನದಲ್ಲಿ ಸಂದೇಶ
April 23, 2026
2:48 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror