ಬೆಂಗಳೂರು: ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ವಾಲ್ ಮಾರ್ಕ್ ಮಾಲಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಒಟ್ಟು ಐದು ಕಡೆ ದಾಳಿ ನಡೆಸಿರುವ ಎಸಿಬಿ ವಿವಿಧ ದಾಖಲೆಗಳ ಜಪ್ತಿ ಮಾಡಿ ತಪಾಸಣೆ ನಡೆಸಿದೆ.
ಎಸಿಬಿ ಸಂಜೀವ್ ಪಾಟೀಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿಕುಮಾರ್ ನೇತೃತ್ವದ ತಂಡ ವಾಲ್ ಮಾರ್ಕ್ ಸಂಸ್ಥೆಯ ಮಾಲಕ ರತನ್ ಲಾಥ್ ಮನೆ ಹಾಗೂ ರೆಸಿಡೆನ್ಸಿ ರಸ್ತೆಯ ಕಚೇರಿ ಮೇಲೆ ದಾಳಿ ನಡೆಸಿದೆ. ಸಂಸ್ಥೆಯ ನೌಕರ ಅಮಿತ್ ಬೋಳಾರ್ ಅವರ ಮನೆ, ಗುತ್ತಿಗೆದಾರರಾದ ಮುನಿರಾಜು, ಗೌತಮ್ ಅವರ ಮನೆಗಳ ಮೇಲೆ ಕೂಡಾ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ದಾಳಿ ವೇಳೆ ಹಲವಾರು ಮಹತ್ವದ ದಾಖಲೆಗಳ ಜಪ್ತಿ ಮಾಡಲಾಗಿದೆ ಎಂದು ಎಸಿಬಿ ಹೇಳಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement