ವಿದ್ಯಾರ್ಥಿಗಳಿಗೆ ಈಜುಗಾರಿಕೆಯ ತಂತ್ರವನ್ನು ಕಲಿಸುವ ಕೇಶವಕೃಪಾ ವೇದಪಾಠ ಶಾಲೆ

April 27, 2019
2:29 PM

ಸುಳ್ಯ:ವೇದಾಧ್ಯಯನಕ್ಕೆ ಕುಳಿತರೆ  ತುಟಿಯಲ್ಲಿ ಇಂಪಾದ ವೇದಮಂತ್ರಗಳನ್ನು ಪಠಿಸುತ್ತಾ ಅಪ್ಪಟ ವೈದಿಕ ಉಡುಗೆಯಲ್ಲೇ ಕಣ್ಣು ಸೆಳೆಯುವ ಪುಟಾಣಿಗಳು ನೀರಿಗಿಳಿದರೆ  ಈಜುಪಟುಗಳಂತೆ ಈಜುತ್ತಾರೆ. ಈ ದೃಶ್ಯ ಕಾಣುವುದು  ಸುಳ್ಯದ ಶ್ರೀಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ.
ಒಂದು ಮಗುವಿನ ವಿಕಾಸ ಪ್ರಕ್ರಿಯೆಯು ಎರಡು ಹಂತದಲ್ಲಿ ನಡೆಯುತ್ತವೆ. ಮೊದಲನೆಯದ್ದು ಅಂತರಂಗವಾಗಿ ಎರಡನೆಯದ್ದು ಬಹಿರಂಗವಾಗಿ. ನೈತಿಕತೆ, ಮಾನವೀಯ ಮೌಲ್ಯಗಳು, ಸಭ್ಯತೆ ಸಂಸ್ಕಾರಗಳು, ಶಿಸ್ತು ಸಂಯಮ, ಬೌದ್ಧಿಕ ವಿಚಾರಗಳು, ಭಾವನಾತ್ಮಕ ಬದಲಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ಬೆಳವಣಿಗೆಗಳೆಲ್ಲಾ ಅಂತರಂಗದ ವಿಕಸನಕ್ಕೆ ಸಂಬಂಧಿಸಿದ್ದಾದರೆ, ಕ್ರೀಡೆ, ವ್ಯಾಯಾಮ, ಯೋಗ, ಕುಸ್ತಿ, ಕರಾಟೆ ಮುಂತಾದ ಶಾರೀರಿಕ ಚಟುವಟಿಕೆಗಳ ಮೂಲಕ ಭೌತಿಕ ದೇಹದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದನ್ನು ಬಹಿರಂಗದ ವಿಕಸನದ ಪ್ರಕ್ರಿಯೆ ಎನ್ನಬಹುದು.ಇಂತಹ ಭೌತಿಕ ದೇಹದ ಬೆಳವಣಿಗೆಗೆ ಪೂರಕವಾದ ಒಂದು ಪ್ರಾಚೀನ ಕಲೆ ಈಜುಗಾರಿಕೆ.

Advertisement
Advertisement

ಈಜುಗಾರಿಕೆ ಅನ್ನುವುದು ಒಂದು ಕಲೆಯೂ ಹೌದು ಕ್ರೀಡೆಯೂ ಹೌದು. ಸಾಮಾನ್ಯವಾಗಿ ಕೆಲವೊಂದು ಕ್ರೀಡೆಗಳು ಕೇವಲ ಮನರಂಜನೆಯನ್ನು ಮಾತ್ರ ಕೊಡುತ್ತವೆ, ಇನ್ನು ಕೆಲವು ಕ್ರೀಡೆಗಳು ಕೇವಲ ಸ್ಫರ್ಧೆಗಳಿಗಷ್ಟೇ ಸೀಮಿತವಾಗಿರುತ್ತವೆ. ಹಾಗೆ ನೋಡಿದರೆ ಈಜುಗಾರಿಕೆ ಅನ್ನುವಂತದ್ದು ಎಲ್ಲಾ ಮಜಲುಗಳಲ್ಲೂ ನಮಗೆ ಲಾಭದಾಯಕವೇ ಸರಿ. ನದಿ ಕೆರೆಗಳಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅಪಾಯದ ಸಂದರ್ಭದಲ್ಲಿ ಈಜುಗಾರಿಕೆಯು ಜೀವರಕ್ಷಣೆಗೆ ನೆರವಾಗುತ್ತದೆ. ಇದು ಸ್ವ ರಕ್ಷಣೆ ಮತ್ತು ಪರರ ರಕ್ಷಣೆ ಎರಡೂ ದೃಷ್ಟಿಯಿಂದ ಮುಖ್ಯ.ಈಜು ಮೈನವಿರೇಳಿಸುವ ಸಾಹಸೀ ಕ್ರೀಡೆಯಾಗಿರುವ ಕಾರಣದಿಂದ ಮಕ್ಕಳಲ್ಲಿ ಸಾಹಸೀ ಪ್ರವೃತ್ತಿಯನ್ನು ಮೈಗೂಡಿಸಲು ನೆರವಾಗುತ್ತವೆ.

Advertisement
Advertisement

ವಿವಿಧ ಬಗೆಯ ಉಪಯೋಗವಿರುವ ಇಂತಹ ಕಲೆಯನ್ನು ಎಳವೆಯಲ್ಲಿಯೇ ಮಕ್ಕಳಿಗೆ ಕರಗತ ಮಾಡಿಸಿಬಿಡಬೇಕೆಂದೇ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಈ ದಿಕ್ಕಿನಲ್ಲಿ ಯೋಚಿಸಿ ಹೆಜ್ಜೆಯಿಟ್ಟಿದೆ.

ಹತ್ತಾರು ವರ್ಷಗಳಿಂದ ವೇದಶಿಬಿರ ಮತ್ತು ಸಂಸ್ಕಾರ ವಾಹಿನಿ ಶಿಬಿರಗಳ ಮೂಲಕ ಮಕ್ಕಳ ಅಂತರಂಗ ವಿಕಸನಕ್ಕೆ ಮಹತ್ತರ ಕಾಣಿಕೆ ನೀಡುತ್ತಿರುವ ಪ್ರತಿಷ್ಠಾನವು ಕಳೆದ ಕೆಲ ವರ್ಷಗಳಿಂದ ವೇದ ಶಿಬಿರದ ಜೊತೆಗೆ ಈಜು ತರಬೇತಿಯನ್ನು ಕೂಡಾ ಜೋಡಿಸಿಕೊಂಡು ಶಿಬಿರಾರ್ಥಿಗಳ ಭೌತಿಕ ವಿಕಸನಕ್ಕೆ ಮುಂದಡಿಯಿಟ್ಟಿದೆ.

Advertisement

ಈ ವರ್ಷದ ಈಜು ತರಬೇತಿ ಶಿಬಿರವು  ಶನಿವಾರ ತೂಗು ಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಻ವರ ಖಾಸಗಿ ಸ್ಥಳ ಕೇರ್ಪಳದ ಶಿವಗಿರಿಯಲ್ಲಿ ಆರಂಭಗೊಂಡಿದ್ದು, ಕೇಶವಕೃಪಾ ಹಿರಿಯ ವಿದ್ಯಾರ್ಥಿ ಪರಿಷದ್ ಅಧ್ಯಕ್ಷ ಬಲರಾಮ ಭಟ್ ಶಿವನಿವಾಸ ಧ್ವಜ ಹಾರಿಸುವ ಮೂಲಕ ಉದ್ಘಾಟಿಸಿ, ಗಿರೀಶ್ ಭಾರದ್ವಾಜ್‍ ಅವರು ಮಕ್ಕಳಿಗೆ ಶುಭವನ್ನು ಹಾರೈಸಿದರು.

ತರಬೇತುದಾರರಾಗಿ ಶಿಬಿರದ ಯೋಗ ಅಧ್ಯಾಪಕರಾದ ಆರ್.ವಿ. ಭಂಡಾರಿ ಬೆಂಗಳೂರು, ಎಂ.ಎಸ್. ನಾಗರಾಜ್ ರಾವ್, ವೇ| ಮೂ| ಅಭಿರಾಮ ಭಟ್ ಸರಳಿಕುಂಜ, ವೇ| ಮೂ| ಪ್ರಕಾಶ್ ಭಟ್ ಬಲಿಪ ಹಾಗೂ ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.

Advertisement

ಶಿಬಿರದ ಸುಮಾರು 120ಕ್ಕಿಂತಲೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ವಾರದ ನಿರ್ಧಿಷ್ಟ ದಿನಗಳಲ್ಲಿ ಸರದಿಯಂತೆ ಈಜು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಲಿದ್ದು ಮೇ 15ರಂದು ಈಜು ಸ್ಪರ್ಧೆ ನಡೆಯಲಿದೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಳುನಾಡ ದೈವಾರಾಧನೆ ಟೂರ್‌ ಪ್ಯಾಕೇಜ್‌…! | ಕರಾವಳಿಗರಿಂದ ಭಾರೀ ಖಂಡನೆ |
December 4, 2023
1:41 PM
by: The Rural Mirror ಸುದ್ದಿಜಾಲ
ಡಿ.24-25 ರಂದು ಪುತ್ತೂರಿನಲ್ಲಿ ಪುತ್ತಿಲ ಪರಿವಾರದಿಂದ ಶ್ರೀನಿವಾಸ ಕಲ್ಯಾಣೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ |
November 29, 2023
1:45 PM
by: ದ ರೂರಲ್ ಮಿರರ್.ಕಾಂ
ಇಂದು ಹಿಂದುಗಳ ಧಾರ್ಮಿಕ ಮಹತ್ವ ಹೊಂದಿರುವ ತುಳಸಿ ಹಬ್ಬ |
November 24, 2023
10:28 AM
by: The Rural Mirror ಸುದ್ದಿಜಾಲ
ಶಾಲಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆ..? | NCERT ಸಮಿತಿ ಶಿಫಾರಸು | ಶಾಲಾ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆ |
November 22, 2023
12:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror