ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ? ಬಾಳಿಲದಲ್ಲಿ ನಡೆಯಿತು ಚರ್ಚೆ

Advertisement

ಬಾಳಿಲ:  ನಮ್ಮೂರಿನ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ? ಹೀಗೊಂದು ಚರ್ಚೆ ಬಾಳಿಲದಲ್ಲಿ ಮಂಗಳವಾರ ನಡೆಯಿತು.

Advertisement

ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಸಮಿತಿಯ ವತಿಯಿಂದ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ  ನಡೆದ ಬೆಳ್ಳಾರೆ ವಿದ್ಯುತ್ ಸಬ್‍ಸ್ಟೇಷನ್ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಮಾವೇಶದಲ್ಲಿ ವಿವಿಧ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Advertisement

ಕೃಷಿಕ ಡಾ| ಪಿ.ಆರ್ ಭಟ್ ಮಾತನಾಡಿ, ವಿದ್ಯುತ್ ಸಮಸ್ಯೆ ತಾಲೂಕಿನ ಒಂದು ಮೂಲಭೂತವಾದ ಸಮಸ್ಯೆಯಾಗಿದೆ. ಜನಪ್ರತಿನಿಧಿಗಳ ಮೇಲೆ ಸತತವಾಗಿ ಒತ್ತಡ ಹೇರುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ.  ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಜೊತೆಗೆ ಕುಡಿಯುವ ನೀರಿನ ಪೂರೈಕೆಗೆ ತೀವ್ರ ತೊಂದರೆಯಾಗುತ್ತಿದೆ ಎಂದರು. ಇದಕ್ಕಾಗಿ ನಾವೆಲ್ಲರೂ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಸರಕಾರದ ಗಮನವನ್ನು ನಮ್ಮೂರಿನ ವಿದ್ಯುತ್ ಕೊರತೆ ಕಡೆಗೆ ಸೆಳೆಯಬೇಕು ಎಂದು  ಹೇಳಿದರು.

ಮಾಹಿತಿ ಹಕ್ಕುಗಳ ಬಗ್ಗೆ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ ಹಾಗೂ ಇಲಾಖಾ ಮಾಹಿತಿಯನ್ನು ಪಂಜ ಉಪವಿಭಾಗದ ಜೂನಿಯರ್ ಇಂಜಿನಿಯರ್ ಪ್ರಸನ್ನ ನೀಡಿದರು.

Advertisement

ಬಳಕೆದಾರರ ವತಿಯಿಂದ ಸರಕಾರ ಹಾಗೂ ಸಂಬಂಧಿಸಿದ ಸಚಿವರಿಗೆ ಸಲ್ಲಿಸಿದ ದೂರು ಮತ್ತು ದೊರೆತ ಪ್ರತಿಕ್ರಿಯೆ ಪ್ರತಿಯನ್ನು ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಚಾಲಕ ಎಂ.ಜಿ ಸತ್ಯನಾರಾಯಣ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಎನ್.ಜಿ ಪ್ರಭಾಕರ ರೈ ವಹಿಸಿದರು. ವೇದಿಕೆಯಲ್ಲಿ ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ರಮೇಶ್ ಕೋಟೆ, ಎ.ಇ ಇ ಹರೀಶ್ ಉಪಸ್ಥಿತರಿದ್ದರು.

Advertisement

ನಿಡ್ಮಾರು ರಾಜಾರಾಮ್ ಸ್ವಾಗತಿಸಿ, ಜಗನ್ನಾಥ ರೈ ವಂದಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಗೋಪಾಲಕೃಷ್ಣ ಭಟ್ ಪ್ರಸ್ತಾವನೆಗೈದರು. ಎನ್.ಜಿ ಲೋಕನಾಥ ರೈ ಕಾರ್ಯಕ್ರಮ ನಿರೂಪಿಸಿದರು.

 

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ? ಬಾಳಿಲದಲ್ಲಿ ನಡೆಯಿತು ಚರ್ಚೆ"

Leave a comment

Your email address will not be published.


*