ವಿಪರೀತ ಬಿಸಿಲಿಗೆ ಬೀಳ್ತಾ ಇದೆ ಅಡಿಕೆ ನಳ್ಳಿ

June 3, 2019
8:00 AM

ಸುಳ್ಯ: ವಿಪರೀತ ಬಿಸಿಲು ಹಾಗೂ ಹವಾಮಾನದ ಏರಿಳಿತದ ಕಾರಣದಿಂದ ನಳ್ಳಿ ಮಾತ್ರವಲ್ಲ ಎಳೆ ಅಡಿಕೆ ಬೀಳ್ತಾ ಇದೆ.  ನೋಡ ನೋಡುತ್ತಿದ್ದಂತೆ ಏನೂ ಮಾಡಲಾಗದ ಸ್ಥಿತಿ ಇದೆ. ಮಳೆಗಾಲ ಕೊಳೆರೋಗವಾಯ್ತು, ಬೇಸಗೆ ಕಾಲ ಬಿಸಿಲಾಗಿ  ನಳ್ಳಿ ಬೀಳುವುದಾಯ್ತು. ಏನೇ ಆದರೂ ಅಡಿಕೆ  ಮಾತ್ರಾ ಕೆಳಗೆ…!

Advertisement
Advertisement

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈಗ ಹವಾಮಾನದ ಏರಿಳಿತ ವಿಪರೀತವಾಗಿದೆ. ಒಂದೇ ದಿನದಲ್ಲಿ  ಬಿಸಿಲು, ಮಳೆ ಹಾಗೂ ಶಾಖ ಗಿಡಗಳ ಮೇಲೆ ಪರಿಣಾಮ ಬೀರ್ತಾ ಇದೆ. ಒಮ್ಮೆಲೇ 38 ಡಿಗ್ರಿಯಿಂದ 40 ಡಿಗ್ರಿಯವರೆಗೆ ತಾಪಮಾನ ಏರುತ್ತದೆ, ಅದೇ ರೀತಿ ಸಂಜೆಯಾಗುತ್ತಿದ್ದಂತೆಯೇ 27 ರಿಂದ 30 ಡಿಗ್ರಿಗೆ ಇಳಿಯುತ್ತದೆ. ಇಂತಹದ್ದೊಂದು ಏರಿಳಿತ ಇತ್ತೀಚೆಗಿನ ವರ್ಷದಲ್ಲಿ ಹೆಚ್ಚಾಗುತ್ತಿದೆ. ಈ ಕಾರಣದಿಂದ ಎಳೆಯ ಅಡಿಕೆ ನಳ್ಳಿ ಬೀಳಲು ಶುರುವಾಗಿದೆ. ಇದಕ್ಕೇನು ಪರಿಹಾರ ಎಂಬ ಚಿಂತೆ ಬೆಳೆಗಾರರನ್ನು  ಕಾಡ್ತಾ ಇದೆ.

 

 

ಮಳೆಗಾಲ ಮಳೆಯ ಕಾರಣದಿಂದ ಕೊಳೆರೋಗ ಬಾಧಿಸಿದರೆ, ಬೇಸಗೆಯಲ್ಲಿ  ವಾತಾವರಣದ ಕಾರಣದಿಂದ ಎಳೆ ನಳ್ಳಿ ಬೀಳುತ್ತಿದೆ.  ಹೀಗಾಗಿ ಅಡಿಕೆ ಬೆಳೆಗಾರಿನಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರಲಾರಂಭಿಸಿದೆ. ಈ ಬಾರಿ ಕೊಳೆರೋಗದ ಕಾರಣದಿಂದ ಸಾಕಷ್ಟು ಫಸಲು ನಾಶ  ಹೊಂದಿದ ಬೆಳೆಗಾರಿನಿಗೆ ಇದೀಗ ಅರಿವಿಲ್ಲದೆ ಅಡಿಕೆ ಫಸಲು ನಾಶವಾಗುತ್ತಿದೆ. ಇದರ ಫಲಿತಾಂಶ ಸಿಗುವುದು ಮಳೆಗಾಲದ ನಂತರವೇ.

ಜೂನ್ 6 ರ ನಂತರ ಮನಳೆಗಾಲ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದುವರೆಗೆ ಈ ಏರಿಳಿತ  ಇರುವ ಕಾರಣದಿಂದ ಸಹಿಸಿಕೊಳ್ಳಬೇಕಷ್ಟೇ.

 

 

ಆದರೆ ವೈಜ್ಞಾನಿಕವಾಗಿ ಇನ್ನೊಂದು ಮಾಹಿತಿ ಸಿಗುತ್ತದೆ, ಅಡಿಕೆ ಮರ 25 ಲೀಟರ್ ನಷ್ಟು ನೀರನ್ನು ಭೂಮಿಯಿಂದ ಹೀರಿಕೊಳ್ಳುತ್ತದೆ. ನೀರಿನ ಕೊರತೆ ಉಂಟಾದಾಗ ಸಹಜವಾಗಿಯೇ ಮರವೂ ಅದಕ್ಕೆ ಹೊಂದಿಕೊಳ್ಳುತ್ತದೆ. ವಿಪರೀತ ಬಿಸಿಲಾಗಾದ ಎಳೆ ಅಡಿಕೆಗೆ ಶಕ್ತಿ ಕುಂದಿ ಬೀಳುವುದು ಒಂದು ಭಾಗವಾದರೆ,  ವಿಪರೀತ ಬಿಸಿಲು ಇದ್ದು ಒಂದು ಮಳೆ ಬಂದರೆ ಇದ್ದಕ್ಕಿದ್ದಂತೆ ಮರ  ಒಮ್ಮೆಲೇ  ಹೆಚ್ಚು ನೀರು ಹೀರಿಕೊಂಡು ಅಡಿಕೆ ನಳ್ಳಿ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೂ ಕೆಲವೊಮ್ಮೆ ನಳ್ಳಿ ಉದುರುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ.  ಅದಕ್ಕಾಗಿ ಅಡಿಕೆ ಮರಕ್ಕೆ ಒಮ್ಮೆಲೇ ಹೆಚ್ಚು ನೀರುಣಿಸುವುದು ಹಾಗೂ ಒಮ್ಮೆಲೇ ನೀರು ಕಡಿಮೆ ಮಾಡುವುದು  ಅಷ್ಟೊಂದು ಒಳ್ಳೆಯದಲ್ಲ, ಈ ಕಾರಣದಿಂದಲೂ ಅಡಿಕೆ ನಳ್ಳಿ ಉದುರುತ್ತದೆ. ವಾತಾವರಣದ ಕಾರಣದಿಂದಾದರೆ ಏನೂ ಮಾಡಲಾಗದು, ಆದರೆ ನೀರುಣಿಸುವುದರಲ್ಲೂ ಎಚ್ಚರಿಕೆ ವಹಿಸಬೇಕಾಗುತ್ತದೆ.

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?
February 15, 2026
6:13 AM
by: ಮಿರರ್‌ ಡೆಸ್ಕ್
ಜಾಗತಿಕ ಕೋಕೋ ಬೆಲೆ ಕುಸಿತ | ಘಾನಾದಲ್ಲಿ ಕೋಕೋ ದರ ಭಾರೀ ಇಳಿಕೆ
February 15, 2026
5:50 AM
by: ಮಿರರ್‌ ಡೆಸ್ಕ್
ಭಾರತ–ಬಾಂಗ್ಲಾದೇಶ ಗಡಿಯಲ್ಲಿ ನಿಪಾ ಆತಂಕ | ಹರಡುವಿಕೆ ಅಪಾಯ ‘ಕಡಿಮೆ’ ಎಂದ WHO
February 15, 2026
5:43 AM
by: ಮಿರರ್‌ ಡೆಸ್ಕ್
ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror