“ವಿಶ್ವ ಆಹಾರ ಸುರಕ್ಷತಾ″ ದಿನದ ಅಂಗವಾಗಿ ಕ್ಯಾಂಪ್ಕೋದಲ್ಲಿ ತರಬೇತಿ ಕಾರ್ಯಕ್ರಮ

Advertisement

ಪುತ್ತೂರು: ಕಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯಲ್ಲಿ “ವಿಶ್ವ ಆಹಾರ ಸುರಕ್ಷತಾ″ ದಿನದ ಅಂಗವಾಗಿ ನಾಲ್ಕು ದಿನದ ತರಬೇತಿ ಕಾರ್ಯಕ್ರಮವನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ  ಎಸ್. ಆರ್ ಸತೀಶ್ಚಂದ್ರ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು,” ಕ್ಯಾಂಪ್ಕೋ ಜಾಗತಿಕ ಮಟ್ಟದಲ್ಲಿ ಗುರುತಿಸಲು ಅದರ ಗುಣಮಟ್ಟ ಮತ್ತು ಸ್ವಾದಿಷ್ಟತೆಯೇ ಕಾರಣ” ಎಂದರು.

Advertisement
Advertisement

ತರಬೇತಿ ಕಾರ್ಯಕ್ರಮವು ಆಹಾರ ಸುರಕ್ಷರತೆ, ವೈಯುಕ್ತಿಕ ನೈರ್ಮಲ್ಯ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ, ಆಹಾರ ಗುಣಮಟ್ಟ ಆಹಾರ ಶೇಖರಣೆ ಮುಂತಾದ ವಿಷಯಗಳಲ್ಲಿ ಕ್ಯಾಂಪ್ಕೋ ಹಿರಿಯ ಅಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ. ಎಲ್ಲಾ ನೌಕರರು ವಿಶ್ವ ಆಹಾರ ಸುರಕ್ಷಾ ದಿನದ ಪ್ರಯುಕ್ತ ಆಹಾರ ಸುರಕ್ಷತೆಯ ಕುರಿತು ಪ್ರಮಾಣ ವಚನ ಸ್ವೀಕರಿಸಿದರು.

Advertisement

ಆರೋಗ್ಯಾಧಿಕಾರಿ ಬದ್ರುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಭಂಡಾರಿ ಎಂ., ಉಪ ಪ್ರದಾನ ವ್ಯವಸ್ಠಾಪಕರಾದ  ರೇಶ್ಮ ಮಲ್ಯ, ಪ್ಯಾಕ್ಟರಿ ಡಿ.ಜಿ.ಯಂ. ಪ್ರಾಸಿಸ್ ಡಿ ಸೋಜ , ಸಹಾಯಕ ಪ್ರದಾನ ವ್ಯವಸ್ಥಾಪಕ ಶ್ಯಾಂ ಪ್ರಸಾದ್, ನೆಸ್ಲೆ ಘಟಕದ ಮುಖ್ಯಸ್ಥಾರಾದ ಪ್ರದೀಪ್ ವಲ್ಸ್’ಲಾ ಉಪಸ್ಥಿತರಿದ್ದರು.

Advertisement

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "“ವಿಶ್ವ ಆಹಾರ ಸುರಕ್ಷತಾ″ ದಿನದ ಅಂಗವಾಗಿ ಕ್ಯಾಂಪ್ಕೋದಲ್ಲಿ ತರಬೇತಿ ಕಾರ್ಯಕ್ರಮ"

Leave a comment

Your email address will not be published.


*