ಸುಳ್ಯ: ಗ್ರಾಮದಲ್ಲಿ ಬಸ್ಸು ತಂಗುದಾಣ ಅತೀ ಅಗತ್ಯ. ಆದರೆ ಶಿಥಿಲಾವಸ್ಥೆ ತಲಪಿದರೆ ಅಪಾಯವೂ ಇದೆ. ಹೀಗಾಗಿ ಬಸ್ಸು ತ<ಂಗುದಾಣ ಸುಸ್ಥಿತಿಯಲ್ಲಿ ಇರಲೇಬೇಕಾದ ಅಗತ್ಯತೆ ಇದೆ. ಕಳಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಇಂತಹದ್ದೊಂದು ಬಸ್ಸು ತಂಗುದಾಣವಿದೆ.
Advertisement
ದಿನನಿತ್ಯ ಬಸ್ ಮುಂತಾದ ವಾಹನಗಳಲ್ಲಿ ಪ್ರಯಾಣಿಸಲು ಹಲವಾರು ಮಂದಿ ಉದ್ಯೋಗಿಗಳು, ಪ್ರಾಯಸ್ಥರು,ಶಾಲಾ ಕಾಲೇಜಿನ ವಿಧ್ಯಾರ್ಥಿಗಳು ಅವಲಂಬಿಸಿರುವ ಕಳಂಜ ಗ್ರಾಮ ಪಂಚಾಯತ್ ಗೆ ಸಂಭಂಧಪಟ್ಟ ಕಳಂಜ ಬಸ್ ತಂಗುದಾಣದ ಸ್ಥಿತಿ ಇದು. ಈ ಬಾರಿಯ ಮಳೆ ಅಬ್ಬರಕ್ಕೆ ಬಸ್ ತಂಗುದಾಣದ ಮೇಲ್ಚಾವಣಿ ಕುಸಿದು ಬಿದ್ದು ಪ್ರಯಾಣಿಕರಿಗೆ ಅಪಾಯ ಅವಘಡ ಆಗುವ ಸಾಧ್ಯತೆ ತಪ್ಪಿದೆ. ಮುಂದೆ ಅಪಾಯಗಳು ಸಂಭವಿಸುವ ಮೊದಲು ಸಂಭಂಧಪಟ್ಟವರು ಇತ್ತ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement