ಮಾರ್ಚ್‌ನಲ್ಲಿ‌ ಮಳೆ ಶಾಕ್….! ರೈತರಿಗೆ ನಷ್ಟದ ಭೀತಿ

March 23, 2026
7:01 AM
ದೇಶದ ವಿವಿದೆಡೆ ಮಾರ್ಚ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್‌ನಲ್ಲಿ ಅಸಾಮಾನ್ಯ ಹವಾಮಾನದಿಂದ ಭಾರೀ ಮಳೆ ಸಂಭವಿಸಿ ಮಳೆ ದಾಖಲಾಗಿದೆ. ಈ ಪರಿಣಾಮ ರೈತರ ಬೆಳೆಗಳಿಗೆ ದೊಡ್ಡ ನಷ್ಟದ ಆತಂಕ ಉಂಟಾಗಿದೆ.

ಮಾರ್ಚ್ ತಿಂಗಳಲ್ಲಿ ಅಪರೂಪವಾಗಿ ಕಾಣುವ ಹವಾಮಾನ ಬದಲಾವಣೆ ದೇಶದ ವಿವಿದೆಡೆ ಉತ್ತಮ ಮಳೆಯಾಗಿದೆ.  ಮಾರ್ಚ್ ತಿಂಗಳಲ್ಲಿ ಇಷ್ಟು ದೊಡ್ಡ ಮಟ್ಟದ ಮಳೆ ಮತ್ತು ಆಲಿಕಲ್ಲು ಮಳೆ ಸಂಭವಿಸಿರುವುದು ಹವಾಮಾನ ಅಸ್ಥಿರತೆಯ ಸೂಚಕವಾಗಿದೆ. ರೈತರ ಬೆಳೆ ಹಾಗೂ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಶೇಷವಾಗಿ ಗುಜರಾತ್‌ನ ರಾಜ್ಕೋಟ್‌ನಲ್ಲಿ  ಮಳೆ ಭಾರೀ ಅಬ್ಬರ ತೋರಿದ್ದು, ಕೆಲವೇ ಗಂಟೆಗಳಲ್ಲಿ 38 ಮಿಮೀ ಮಳೆ ದಾಖಲಾಗಿದ್ದು, ಇದು ಮಾರ್ಚ್ ತಿಂಗಳ ಇತಿಹಾಸದಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಕೇವಲ 0.1 ಮಿಮೀ ಮಳೆಯಷ್ಟೇ ಆಗುತ್ತದೆ. ಹಿಂದಿನ 15 ವರ್ಷಗಳಲ್ಲಿ ಬಹುತೇಕ ವರ್ಷಗಳಲ್ಲಿ ಮಳೆಯೇ ಆಗದ ಪ್ರದೇಶದಲ್ಲಿ ಇಷ್ಟು ಭಾರೀ ಮಳೆ ಸಂಭವಿಸಿದ್ದು ಅಪರೂಪದ ಘಟನೆ ಎಂದು ತಜ್ಞರು ಹೇಳಿದ್ದಾರೆ ಎಂದು ಖಾಸಗಿ ಹವಾಮಾನ ಸಂಸ್ಥೆ  ಸ್ಕೈಮೆಟ್‌ ಹೇಳಿದೆ.

ಈ ಅಸಾಮಾನ್ಯ ಹವಾಮಾನಕ್ಕೆ ಪ್ರಮುಖ ಕಾರಣಗಳನ್ನು ಕೂಡಾ ತಜ್ಞರು ಹೇಳಿದ್ದಾರೆ. ಪಶ್ಚಿಮ ವ್ಯತ್ಯಯ (Western Disturbance), ಚಕ್ರವಾತೀಯ ಸಂಚಲನ,  ಮೇಲ್ಮಟ್ಟದ ಟ್ರಫ್‌ ವ್ಯವಸ್ಥೆ ಹಾಗೂ ಅರೇಬಿಯನ್ ಸಮುದ್ರದಿಂದ ತೇವಾಂಶ ಹರಿವು  ಈ ಎಲ್ಲಾ ವ್ಯವಸ್ಥೆಗಳು ಒಂದೇ ವೇಳೆ ಕಾರ್ಯನಿರ್ವಹಿಸಿದ ಪರಿಣಾಮ ಗುಡುಗು, ಗಾಳಿ, ಮಳೆ ಮತ್ತು ಆಲಿಕಲ್ಲು ಮಳೆ ಸೇರಿ ತೀವ್ರ ಹವಾಮಾನ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಕೈಮೆಟ್‌ ಹೇಳಿದೆ.

ಈ ಅಕಾಲಿಕ ಮಳೆ ಪರಿಣಾಮ, ಬೆಳೆ ಹಾನಿ (ಗೋಧಿ, ಕಡಲೆ, ಜೀರಿಗೆ ಮುಂತಾದವು) , ಕೊಯ್ಲಿಗೆ ಬಂದ ಬೆಳೆಗಳಿಗೆ ನಷ್ಟ, ಮಾರುಕಟ್ಟೆ ಸರಬರಾಜು ವ್ಯತ್ಯಯ ಹಾಗೂ  ಗುಣಮಟ್ಟ ಸಮಸ್ಯೆ ಕಂಡುಬರಬಹುದು ಎಂದು ವರದಿಗಳು ತಿಳಿಸಿವೆ.

ಹವಾಮಾನ ತಜ್ಞರ ಪ್ರಕಾರ, ಇದೇ ರೀತಿಯ ಮತ್ತೊಂದು ವ್ಯವಸ್ಥೆ ಈಗ ಮಧ್ಯಪ್ರಾಚ್ಯ ಭಾಗದಲ್ಲಿ ರೂಪಗೊಂಡಿದ್ದು, ಮುಂದಿನ 2-3 ದಿನಗಳಲ್ಲಿ ಮತ್ತೆ ಇದೇ ರೀತಿಯ ಹವಾಮಾನ ಸಂಭವಿಸುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

An unusual weather event struck Rajkot with heavy rain, strong winds and hailstorm, recording a historic 38 mm rainfall in March. The rare phenomenon may impact crops and agriculture, raising concerns among farmers.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ
July 24, 2026
6:22 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದ ಶಾಲೆ-ಕಾಲೇಜುಗಳಿಗೆ ಇಂದು ರಜೆ -ಉತ್ತರ ಕನ್ನಡದ ಕೆಲವು ತಾಲೂಕಿನಲ್ಲೂ ರಜೆ ಘೋಷಣೆ
July 24, 2026
5:56 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ
July 23, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror