ಶಿವಗಂಗೆಯಲ್ಲಿ ಯುವಕನ ಪ್ರಾಣ ರಕ್ಷಣೆ ಮಾಡಿದ ಸುಳ್ಯದ ಯುವಕರು

Advertisement

ಸುಳ್ಯ:  ಪ್ರೇಮ ವೈಫಲ್ಯದ ಕಾರಣದಿಂದ  ಶಿವ ಗಂಗೆ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು  ಸುಳ್ಯದ ಯುವಕರು ಸಾಹಸದಿಂದ ಬದುಕಿಸಿದ್ದಾರೆ.

Advertisement

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  7 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಶಿವಂಗಂಗೆಗೆ ತೆರಳಿದ್ದರು. ಬೆಟ್ಟ ತಲಪುವ ಹೊತ್ತಿಗೆ ಯುವಕನೊಬ್ಬ ಮೇಲಿನಿಂದ ಜಿಗಿಯಲು ಸಿದ್ಧತೆ ಮಾಡಿರುವುದನ್ನು  ಗಮನಿಸಿದ ಯುವಕರ ತಂಡವು ಅಲ್ಲಿನ ಅರ್ಚಕರ ಸಹಾಯದಿಂದ ರಕ್ಷಿಸಿದರು. ಈ ರಕ್ಷಣಾ ಕೆಲಸಕ್ಕೆ  ಬೆಂಗಳೂರು ಯುವಕರು ಕೈಜೋಡಿಸಿದರು.  ಯುವಕರನ ರಕ್ಷಿಸಿದ ಬಳಿಕ ತುಮಕೂರು ಪೊಲೀಸರಿಗೆ ಒಪ್ಪಿಸಲಾಯಿತು.

Advertisement
Advertisement

ಸುಳ್ಯದ ಯುವಕರ ತಂಡದಲ್ಲಿ ಜಯದೀಪ ಕುದ್ಕುಳಿ , ರಾಜೇಶ್ ಚೊಕ್ಕಾಡಿ, ಧನುಷ್ ಪೆರುಂಬಾರ್, ರೋಹಿತ್ ಪೇರಾಲು, ಉದಿತ್  ಕುಮಾರ್ ಅಜ್ಜಾವರ, ಲಿಖಿತ್ ಸುಳ್ಯ , ಗೌತಮ್ ಸುಳ್ಯ ಇದ್ದರು.

ಶಿವಗಂಗೆ ಬೆಟ್ಟವು  ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದ್ದು  ತುಮಕೂರಿನಿಂದ 20 ಕಿಮೀ ದೂರದಲ್ಲಿದೆ.  ಈ ಬೆಟ್ಟ ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರದಲ್ಲಿ ಇದೆ.

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಶಿವಗಂಗೆಯಲ್ಲಿ ಯುವಕನ ಪ್ರಾಣ ರಕ್ಷಣೆ ಮಾಡಿದ ಸುಳ್ಯದ ಯುವಕರು"

Leave a comment

Your email address will not be published.


*