ಶ್ರೀ ಕೇಶವ ಕೃಪಾದಲ್ಲಿ ಅಗ್ನಿಶಾಮಕ ಪ್ರಾತ್ಯಕ್ಷಿಕಾ ಕಾರ್ಯಾಗಾರ

ಸುಳ್ಯ: ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ವೇದ ಶಿಬಿರದಲ್ಲಿ ವೇದಾಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಅಗ್ನಿಶಾಮಕ ಪ್ರಾತ್ಯಕ್ಷಿಕಾ ಕಾರ್ಯಾಗಾರ ನಡೆಯಿತು.

Advertisement

ಸುಳ್ಯದ ಅಗ್ನಿಶಾಮಕ ದಳದ ಸಬ್ ಇನ್ಸ್‍ಪೆಕ್ಟರ್ ಲೋಕೇಶ್ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಪ್ರಾತ್ಯಕ್ಷಿಕಾ ಕಾರ್ಯಾಗಾರವನ್ನು ನಡೆಸಿಕೊಟ್ಟರು. ನೀರು, ಬೆಂಕಿ, ವಿದ್ಯುತ್ ಮತ್ತು ಗ್ಯಾಸ್‍ನಿಂದ ಸಂಭವಿಸಬಹುದಾದ ಆಕಸ್ಮಿಕ ಅವಘಡಗಳ ಕುರಿತಾಗಿ ಜಾಗೃತಿ, ಅವಘಡಗಳಿಂದ ಪಾರಾಗುವ ಉಪಾಯಗಳು ಮತ್ತು ಬೆಂಕಿ ನಂದಿಸುವ ವಿಧಾನವನ್ನು ಮಾಡಿ ತೋರಿಸುವುದರ ಜೊತೆಗೆ ಪ್ರಶ್ನೋತ್ತರ ರೂಪದಲ್ಲಿ ವಿದ್ಯಾರ್ಥಿಗಳ ಸಂದೇಹವನ್ನು ಬಗೆಹರಿಸಲು ಅವಕಾಶ ಕಲ್ಪಿಸಿಕೊಡಲಾಯಿತು. ವೇದಿಕೆಯಲ್ಲಿ ಆರ್. ವಿ. ಭಂಡಾರಿ ಉಪಸ್ಥಿತರಿದ್ದರು.

Advertisement

ಪ್ರತಿಷ್ಠಾನದ ವೇದ ಶಿಕ್ಷಕ ಅಭಿರಾಮ ಭಟ್ ಸರಳಿಕುಂಜ ಸ್ವಾಗತಿಸಿ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಶ್ರೀ ಕೇಶವ ಕೃಪಾದಲ್ಲಿ ಅಗ್ನಿಶಾಮಕ ಪ್ರಾತ್ಯಕ್ಷಿಕಾ ಕಾರ್ಯಾಗಾರ"

Leave a comment

Your email address will not be published.


*