ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ನೆನಪಲ್ಲಿ ರಕ್ತದಾನ ಶಿಬಿರ

Advertisement

ಸಂಪಾಜೆ : ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಸಂಪಾಜೆಯ ಅಭಿವೃದ್ಧಿಗಾಗಿ ದುಡಿದ  ದಿ. ಬಾಲಚಂದ್ರ ಕಳಗಿಯವರ ನೆನಪಲ್ಲಿ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ ಶನಿವಾರ ನಡೆಯಿತು.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆಯಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಜಿ.ಕೆ.ಸುಬ್ರಮಣ್ಯ ಭಟ್ , ಮಡಿಕೇರಿ ಜಿಲ್ಲಾ ಆರೋಗ್ಯ ಕೇಂದ್ರದ ತಾಲೂಕು ಅಧಿಕಾರಿಗಳಾದ ಡಾ. ಶಿವಕುಮಾರ್, ಡಾ. ಕರಂಬಯ್ಯ, ರಕ್ತ ನಿಧಿ ಘಟಕ, ವೈದ್ಯಕೀಯ ಕಾಲೇಜು ಮಡಿಕೇರಿ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿನುತ್ ಹೆಚ್.ಎಸ್, ಉದ್ಭವ ಟ್ರಸ್ಟ್ ನ ವ್ಯವಸ್ಥಾಪಕರಾದ  ಶಿವಕುಮಾರ್,  ಸಂಪಾಜೆ ಬಿ.ಜೆ.ಪಿ ಸ್ಥಾನೀಯ ಅಧ್ಯಕ್ಷರಾದ ಮಾಯಿಲಪ್ಪ ಮೂಲ್ಯ, ಬಾಲಚಂದ್ರ ಕಳಗಿಯವರ ತಂದೆ ವೆಂಕಪ್ಪ ಕಳಗಿ, ಗ್ರಾಮ ಪಂಚಾಯತ್ ಸದಸ್ಯರಾದ ಕಳಗಿಯವರ ಪತ್ನಿ ರಮಾದೇವಿ, ರಾಜಾರಾಮ್ ಕಳಗಿ, ನಳಿನಿ ರಾಜಾರಾಮ್ ಕಳಗಿ, ಸಂಪಾಜೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಸುಂದರ್ ಬಿಸಲುಮನೆ, ಸಂಪಾಜೆ ಪಯಸ್ವಿನಿ ಬ್ಯಾಂಕಿನ ಉಪಾಧ್ಯಕ್ಷರಾದ ದಯಾನಂದ ಪನೇಡ್ಕ, ನಿರ್ದೇಶಕರಾದ ರಮಾನಂದ ಬಾಳಕಜೆ ಮತ್ತು ತೀರ್ಥಪ್ರಸಾದ್ ಕೋಲ್ಚಾರ್, ಚೆಂಬು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾದ ತೀರ್ಥರಾಮ ಪೂಜಾರಿಗದ್ದೆ, ವಿಶ್ವ ಹಿಂದೂ ಪರಿಷತ್ ಚೆಂಬು ಘಟಕದ ಸಂಚಾಲಕ ವಿಜಯ್ ನಿಡಿಂಜಿ ಭಾಗವಹಿಸಿದ್ದರು.

Advertisement
Advertisement

ಸ್ವಾಗತ ಭಾಷಣವನ್ನು ಪುರುಷೋತ್ತಮ ಬಾಳೆಹಿತ್ಲು ನೆರವೇರಿಸಿದರು, ಕಾರ್ಯಕ್ರಮದಲ್ಲಿ ಮೌನಾಚಾರಣೆಯನ್ನು ಮಾಡುವ ಮೂಲಕ ಅಭಿಮಾನಿಗಳು ಮತ್ತು ಬಂಧು ಮಿತ್ರರು ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಅನೇಕರು ರಕ್ತದಾನ ಮಾಡಿದರು. ಕಾರ್ಯಕ್ರಮಕ್ಕೆ ಕೊಡಗು ಬಿ.ಜೆ.ಪಿ ಜಿಲ್ಲಾಧ್ಯಕ್ಷರು ಭಾರತೀಶ್  ಶುಭಕೋರಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ನೆನಪಲ್ಲಿ ರಕ್ತದಾನ ಶಿಬಿರ"

Leave a comment

Your email address will not be published.


*