ಸಮಾಜವನ್ನು ಅಖಂಡ ಮತ್ತು ಅದ್ವೈತವಾಗಿಸಿ ಶ್ರೀಶಂಕರರು ಜಗದ್ಗುರುಗಳಾದರು

Advertisement

ಸುಳ್ಯ: ಮನುಷ್ಯನ ಸಂಕುಚಿತ ಭಾವನೆಗಳಿಂದ ಬೇರೆ ಬೇರೆ ಪಂಗಡಗಳಾಗಿ, ಮತಗಳಾಗಿ ಸನಾತನ ಹಿಂದೂ ಧರ್ಮಕ್ಕೆ ಮುಳ್ಳಾಗುವ ಸಂದರ್ಭದಲ್ಲಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ತನ್ನ ಜೀವನದಲ್ಲಿ ಪೂರ್ಣವಾಗಿ ಅಳವಡಿಸಿಕೊಂಡು, ಸಮಾಜವನ್ನು ತನ್ನೊಂದಿಗೆ ಸನ್ಮಾರ್ಗದಲ್ಲಿ ಮುನ್ನಡೆಸಿಕೊಂಡು ಇಡಿಯ ಸಮಾಜವನ್ನು ಅಖಂಡ ಮತ್ತು ಅದ್ವೈತವಾಗಿಸಿ ಶ್ರೀಶಂಕರರು ಜಗದ್ಗುರುಗಳಾದರು ಎಂದು ವೇ| ಮೂ| ಅಭಿರಾಮ ಶರ್ಮಾ ಹೇಳಿದರು.

Advertisement

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಶ್ರೀ ಶಂಕರ ಜಯಂತಿ ಆಚರಣೆಯ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದರು.

Advertisement
Advertisement

ಸಭಾಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ. ಎಸ್. ನಾಗರಾಜ್ ರಾವ್ ‘ಸಾವಿರದ ಇನ್ನೂರು ವರುಷದ ಹಿಂದೆ ಜನಿಸಿದ್ದ ಶ್ರೀ ಶಂಕರ ಭಗವತ್ಪಾದರನ್ನು ನಾವು ಇನ್ನೂ ಪ್ರಾತಸ್ಪರಣೆ ಮಾಡುತ್ತೇವೆಂದರೆ ಅವರ ಸಾಧನೆ ಅಪಾರ. ಇಂದು ನಾವು ನೀವು ವೇದ, ಸನಾತನ ಹಿಂದೂ ಧರ್ಮದ ಆಚರಣೆಗಳನ್ನು ನಡೆಸುತ್ತಿದ್ದೇವೆ ಅಂದರೆ ಅದಕ್ಕೆ ಶಂಕರರ ಕೊಡುಗೆ ಅಪಾರ’ ಎಂದರು.

ಗೀತಾಲಕ್ಷ್ಮೀ ಕಂಬಾರು ಶಂಕರಾಚಾರ್ಯರ ಜೀವನಚರಿತ್ರೆಯ ಕುರಿತು ಉಪನ್ಯಾಸ ನೀಡಿದರು.

Advertisement

ವೇ| ಮೂ| ಸುದರ್ಶನ ಶರ್ಮ ಶುಭಹಾರೈಸಿದರು. ವೇದಿಕೆಯಲ್ಲಿ ವೇ| ಮೂ| ಪುರೋಹಿತ ನಾಗರಾಜ ಭಟ್, ಶ್ರೀ ಆರ್. ವಿ. ಭಂಡಾರಿ, ವೇ| ಮೂ| ಆಶ್ರಿತರಾಮ ಶರ್ಮಾ, ವೇ| ಮೂ| ಪ್ರಕಾಶ ಬಲಿಪ ಉಪಸ್ಥಿತರಿದ್ದರು. ಶಂಕರಜಯಂತಿ ಅಂಗವಾಗಿ ಶಿಬಿರಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇ| ಮೂ| ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ವೇ| ಮೂ| ಪ್ರಕಾಶ ಬಲಿಪ ವಂದನಾರ್ಪಣೆ ನಡೆಸಿದರು. ಶ್ರೀಮತಿ ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸಮಾಜವನ್ನು ಅಖಂಡ ಮತ್ತು ಅದ್ವೈತವಾಗಿಸಿ ಶ್ರೀಶಂಕರರು ಜಗದ್ಗುರುಗಳಾದರು"

Leave a comment

Your email address will not be published.


*