ಸರಣಿ ಶಿವಪೂಜಾ ಅಭಿಯಾನ : ಪೂರ್ವಭಾವಿ ಸಭೆ

Advertisement

ಸುಳ್ಯ: ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಸುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಮೂರು ವರ್ಷ ಪೂರೈಸಿರುವ ಎಲ್ಲಾ ವಿದ್ಯಾರ್ಥಿಗಳ ಮನೆಯಲ್ಲಿ ನಡೆಸಲ್ಪಡುವ ಸರಣಿ ಶಿವಪೂಜಾ ಅಭಿಯಾನವನ್ನು ಪ್ರಾರಂಭಿಸುವ ಸಲುವಾಗಿ ಪೋಷಕರ ಪೂರ್ವಭಾವಿ ಸಭೆಯು ಶ್ರೀ ಕೇಶವಕೃಪಾದಲ್ಲಿ ನಡೆಯಿತು.

Advertisement

ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಶಿವಪೂಜೆಯ ಬಗ್ಗೆ ಮಾಹಿತಿ ಹಾಗೂ ಪ್ರಯೋಜನದೊಂದಿಗೆ ಧರ್ಮಜಾಗೃತಿಯ ಸಂದೇಶವನ್ನು ನೀಡುವ ಶಿವಾರಾಧನೆಯ ಮಹತ್ವವನ್ನು ವಿವರಿಸಿದರು.
ಈ ವರ್ಷದ ಅಭಿಯಾನದ ಪ್ರಧಾನ ಸಂಚಾಲಕರಾಗಿ ಉದಯಶಂಕರ ಭಟ್ ಕೊಡ್ಯಡ್ಕ ಹಾಗೂ ಸಹಸಂಚಾಲಕರಾಗಿ ಸತ್ಯನಾರಾಯಣ ಕರತಂಡ ಮತ್ತು ಮಹಿಳಾ ಸಂಚಾಲಕಿಯಾಗಿ  ಮಮತಾ ರಾಜಾರಾಮ ಅವರನ್ನು ಆಯ್ಕೆ ಮಾಡಲಾಗಿದೆ.
ಸದ್ರಿ ವರ್ಷದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಸುಮಾರು 30 ಮನೆಗಳಲ್ಲಿ ಪ್ರತೀ ಭಾನುವಾರದಂದು ಶಿವಾರಾಧನೆ ನಡೆಯಲಿದ್ದು, ಈ ಹಿಂದಿನ ವರ್ಷಗಳಲ್ಲಿ ಒಟ್ಟು 406 ಶಿವಪೂಜಾ ನೆರವೇರಿಸಿದ್ದು, 407ನೇ ಅಭಿಯಾನದಿಂದ ಮುಂದುವರಿಯಲಿದೆ. ಸಪ್ಟಂಬರ್ ತಿಂಗಳ 15ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಸದ್ರಿ ವರ್ಷದ ಅಭಿಯಾನವು ಸಮಾರೋಪಗೊಳ್ಳಲಿದೆ.

Advertisement
Advertisement

ವೇದಿಕೆಯಲ್ಲಿ ರಾಜಗೋಪಾಲ ಭಟ್, ವೇ| ಮೂ| ಸುದರ್ಶನ ಭಟ್, ಕುಂಬ್ರ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಅಭಿಯಾನದ ನೂತನ ಸಂಚಾಲಕ ಉದಯಶಂಕರ ಭಟ್ ಕೊಡ್ಯಡ್ಕ ಎಲ್ಲರ ಸಹಕಾರವನ್ನು ಯಾಚಿಸಿ ಧನ್ಯವಾದ ಸಮರ್ಪಿಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸರಣಿ ಶಿವಪೂಜಾ ಅಭಿಯಾನ : ಪೂರ್ವಭಾವಿ ಸಭೆ"

Leave a comment

Your email address will not be published.


*