ಸರ್ವೆ : ವಿಶೇಷ ಸಾಧನೆ ತೋರಿದ ಯುವಕ ಮಂಡಲದ ಸದಸ್ಯರಿಗೆ ಅಭಿನಂದನೆ

Advertisement

ಸವಣೂರು : ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ 2018-19 ರ ಸಾಲಿನಲ್ಲಿ ವಿಶೇಷ ಸಾಧನೆ ತೋರಿದ ಯುವಕ ಮಂಡಲದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಸರ್ವೆ ಎಸ್ ಜಿ ಎಂ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

Advertisement

ಯುವಕ ಮಂಡಲದ ಕಾರ್ಯಕ್ರಮಗಳ ಆಯೋಜನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸದಸ್ಯರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

Advertisement
Advertisement

ಸ್ವಚ್ಛ ಭಾರತ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮಗಳ ಸಂಯೋಜಕ ,ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಜೇಶ್ ಎಸ್ ಡಿ, ಅತಿ ಹೆಚ್ಚು ಮಾಸಿಕ ಸಭೆಗಳಲ್ಲಿ ಭಾಗವಹಿಸಿದ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಂಯೋಜಕ ರಾಮಣ್ಣ ಪೂಜಾರಿ ವಿಜಯ ಬ್ಯಾಂಕ್, ಸಾಂಸ್ಕೃತಿಕ ಕಾರ್ಯಕ್ರಮ,”ಕಂಡಡೊಂಜಿ ದಿನ ” ಕಾರ್ಯಕ್ರಮ ಸಂಯೋಜಕ ಗೌತಮ್ ರಾಜ್ ಕರಂಬಾರು, ಭಜನಾ ತರಬೇತಿ ಕಾರ್ಯಕ್ರಮಗಳ ಸಂಯೋಜಕ ಮನೋಜ್ ಸುವರ್ಣ ಸೊರಕೆ, ಭಜನಾ ತರಬೇತುದಾರ ಜಯರಾಜ್ ಸುವರ್ಣ ಸೊರಕೆ, ಅಕ್ರಮ ಮದ್ಯ ಮಾರಾಟ ವಿರುದ್ಧದ ಪ್ರತಿಭಟನಾ ಸಭೆ ಮತ್ತು ಅಭಿಯಾನದ ಯಶಸ್ಸಿಗಾಗಿ ದುಡಿದ ದಿನೇಶ್ ಭಕ್ತಕೋಡಿ ಹಾಗೂ ಬಾಲಕೃಷ್ಣ ಕಲ್ಲಗುಡ್ಡೆ, ಯುವಕ ಮಂಡಲದ ಅತಿ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು ಅವರನ್ನು ಅಭಿನಂದಿಸಲಾಯಿತು.

ಯುವಕ ಮಂಡಲದ ಗೌರವಾಧ್ಯಕ್ಷ , ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ್ ಎಸ್ ಡಿ, ಗೌರವ ಸಲಹೆಗಾರರಾದ ಪ್ರಸನ್ನ ಜಿ ಕೆ, ಶಶಿಧರ್ ಎಸ್ ಡಿ, ಎಸ್ ಜಿ ಎಂ ಪ್ರೌಢಶಾಲೆಯ ಮುಖ್ಯ ಗುರು ಶ್ರೀನಿವಾಸ್ ಎಚ್ ಬಿ ಸಾಧಕರನ್ನು ಅಭಿನಂದಿಸಿದರು.

Advertisement

ಯುವಕ ಮಂಡಲದ ಪ್ರ ಕಾರ್ಯದರ್ಶಿ ತಿಲಕ್ ರಾಜ್ ಕರಂಬಾರು, ಮಾಜಿ ಅಧ್ಯಕ್ಷರಾದ ಸುರೇಶ್ ಸರ್ವೆದೋಳಗುತ್ತು , ಪದಾ„ಕಾರಿಗಳಾದ ಅಶೋಕ್ ಎಸ್ ಡಿ, ಹರೀಶ್ ಪಾಲೆತ್ತಗುರಿ, ಸದಸ್ಯರಾದ ವಸಂತ ಪೂಜಾರಿ ಕೈಪಂಗಳದೋಳ,ರಾಮಕೃಷ್ಣ ಸರ್ವೆದೋಳಗುತ್ತು , ಜಯಪ್ರಕಾಶ್ ಆಲೇಕಿ, ಕಿರಣ್ ಸರ್ವೆದೋಳಗುತ್ತು , ಪ್ರಮೋದ ಆಲೇಕಿ, ಗೌತಮ್ ಪಟ್ಟೆಮಜಲು, ಶಿವಪ್ರಸಾದ್ ಆಲೇಕಿ, ನಂದನ್ ಸರ್ವೆದೋಳಗುತ್ತು, ಸಂದೇಶ ಆಚಾರ್ಯ ಭಕ್ತಕೋಡಿ, ಸುರೇಶ್ ಆಚಾರ್ಯ ಭಕ್ತಕೋಡಿ, ಲಕ್ಷ್ಮಣ ಆಚಾರ್ಯ ಭಕ್ತಕೋಡಿ ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳ ಗುತ್ತು ಪ್ರಸ್ತಾವನೆಗೈದರು.  ಕಾರ್ಯಕಾರಿ ಸಮಿತಿ ಸದಸ್ಯ ರಾಮಣ್ಣ ಪೂಜಾರಿ ಸ್ವಾಗತಿಸಿದರು, ಖಜಾಂಚಿ ನಾಗೇಶ್ ಪಟ್ಟೆಮಜಲು ವಂದಿಸಿದರು. ಜತೆ ಕಾರ್ಯದರ್ಶಿ ಗುರುರಾಜ್ ಪಟ್ಟೆಮಜಲು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸರ್ವೆ : ವಿಶೇಷ ಸಾಧನೆ ತೋರಿದ ಯುವಕ ಮಂಡಲದ ಸದಸ್ಯರಿಗೆ ಅಭಿನಂದನೆ"

Leave a comment

Your email address will not be published.


*