ಸರ್ವೆ : ಹಿಂ.ಜಾ.ವೇ ಯಿಂದ ಪುಸ್ತಕ ವಿತರಣೆ

Advertisement

ಸವಣೂರು: ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ  ಇದರ ವತಿಯಿಂದ ಪ್ರತಿ ವರ್ಷದಂತೆ ಸರ್ವೆ ಗ್ರಾಮಕ್ಕೆ ಸಂಬಂಧಪಟ್ಟ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 1 ನೇ ತರಗತಿಯಿಂದ 10 ನೇ ತರಗತಿ ವರೆಗಿನ ಸುಮಾರು 120 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಶಾಲಾ ಪರಿಕರಗಳನ್ನು ರವಿವಾರ ಸಂಜೆ ಸರ್ವೆ ಸುಬ್ರಾಯ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

Advertisement

ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಗಿರಿಶಂಕರ್ ಸುಲಾಯ ಅವರು,ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮುಂಡೂರು ಗ್ರಾ. ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಬೋಟ್ಯಾಡಿ ಶುಭಹಾರೈಸಿದರು.

Advertisement

ಮಂಗಳೂರಿನ ಕ್ಯಾಡ್ ಸೆಂಟರ್ ಫ್ರಾಂಚೈಸಿಯ ಸಾರಿಕ ಅನಿಲ್ ಹೆಗ್ಡೆ ಉಚಿತ ಪುಸ್ತಕ ಹಾಗೂ ಕಲಿಕಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದರು.
ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಸರ್ವೆ,ಹಿಂ.ಜಾ.ವೇ. ಅಧ್ಯಕ್ಷ ಪದ್ಮನಾಭ ಗೌಡ ಸರ್ವೆ,ನವೀನ್ ರೈ ಸರ್ವೆ, ಯೋಗಿಶ್ ಟಿ, ಯತೀಶ್ ಸರ್ವೆ,ಗೌತಮ್ ರೈ,ಪ್ರವೀಣ್ ನಕ್ಕಿದಡ್ಕ,ದೇವಪ್ಪ ಕಾಡಬಾಗಿಲು,ಧನಂಜಯ,ಜಿತೇಶ್, ಕಿರಣ್,ಸುಂದರ,ಹರೀಶ್,ಸೌರಾಜ್ ,ಲಕ್ಷ್ಮೀಶ್ ರೈ ಸರ್ವೆ ಉಪಸ್ಥಿತರಿದ್ದರು.

ಸ್ವಸ್ತಿಕ್ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿ, ಹಿಂ.ಜಾ. ವೇ ಕಾರ್ಯದರ್ಶಿ ಜನಾರ್ದನ ಸರ್ವೆ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸರ್ವೆ : ಹಿಂ.ಜಾ.ವೇ ಯಿಂದ ಪುಸ್ತಕ ವಿತರಣೆ"

Leave a comment

Your email address will not be published.


*