ಸವಣೂರು: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.
ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿರವರು ವಿಶೇಷ ಈದ್ ನಮಾಝಿನ ಮೊದಲು ಈದ್ ಸಂದೇಶ ನೀಡಿದ ಅವರು `ಕಳೆದ ಒಂದು ತಿಂಗಳಿನಿಂದ ರಂಝಾನ್ ಉಪವಾಸ ಆಚರಿಸುತ್ತಾ ನಾವು ಆತ್ಮ ಸಂಸ್ಕರಣೆಗೆ ಒಡ್ಡಿಕೊಂಡಿದ್ದೇವೆ.ಅನುಗ್ರಹೀತ ರಂಝಾನ್ ಮಾಸ ನಮ್ಮಿಂದ ವಿದಾಯ ಕೋರಿದೆ. ರಂಝಾನಿನಲ್ಲಿ ನಮ್ಮ ಜೀವನಕ್ರಮದಲ್ಲಿ ಯಾವ ರೀತಿಯ ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆಯೋ ಅದನ್ನು ಮುಂಬರುವ ದಿನಗಳಲ್ಲಿ ಅನುಸರಿಸುವ ಮೂಲಕ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಲು ಪರಿಶ್ರಮಿಸೋಣ.ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾದ ಈದ್ ಉಲ್ ಫಿತ್ರ್ ನಾಡಿನೆಲ್ಲೆಡೆ ಹರ್ಷೋಲ್ಲಾಸವನ್ನು ಉಂಟುಮಾಡಲಿ’ ಎಂದು ಶುಭ ಹಾರೈಸಿದರು.
ವಿಶೇಷ ಈದ್ ನಮಾಝಿನ ಬಳಿಕ ಕುತುಬಾ ಪಾರಾಯಣ ನಡೆಯಿತು. ನಂತರ ಅಗಲಿದ ಗುರುಹಿರಿಯರ ಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಮಾಝಿನ ಬಳಿಕ ಪರಸ್ಪರ ಆಲಂಗಿಸಿ ಶುಭಾಶಯ ಸಲ್ಲಿಸುವ ಮೂಲಕ ಈದ್ ಉಲ್ ಫಿತ್ರ್ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸವಣೂರು : ಚಾಪಳ್ಳ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಫಿತ್ರ್"