ಸವಣೂರು : ವಿದ್ಯಾರಶ್ಮಿಯಲ್ಲಿ ಪಿ.ಯು.ಸಿ. ತರಗತಿಗಳ ವಿದ್ಯಾರ್ಥಿಗಳ ಪ್ರವೇಶೋತ್ಸವ

Advertisement

ಸವಣೂರು : ಸವಣೂರು ವಿದ್ಯಾರಶ್ಮಿಯಲ್ಲಿ ಪ್ರಥಮ ಪಿ.ಯು.ಸಿ. ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪ್ರವೇಶೋತ್ಸವ ನಡೆಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು ಪ್ರಥಮ ಪಿ.ಯು.ಸಿ.ಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೆನ್ನುಗಳನ್ನು ವಿತರಿಸಿ ಮಾತನಾಡಿ , ನಮ್ಮಲ್ಲಿ ಗ್ರಾಮೀಣ ಭಾಗದ ಸಾಧಾರಣ ಕಲಿಕಾ ಮಟ್ಟದ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಅವರು 90 ಶೇಕಡಾಕ್ಕಿಂತ ಮಿಕ್ಕಿ ಅಂಕಗಳಿಸುವಂತೆ ಮಾಡುವುದರ ಕಡೆಗೆ ವಿಶೇಷ ಆದ್ಯತೆ ನೀಡುತ್ತಿದ್ದೇವೆ .ವಿದ್ಯಾರಶ್ಮಿ ಯಾವತ್ತೂ ಆರ್ಥಿಕ ಆದಾಯದ ಕಡೆಗೆ ಗಮನವೀಯದೆ ಉತ್ತಮ ಗುಣಮಟ್ಟದ ಪರಿಪೂರ್ಣ ಶಿಕ್ಷಣದ ಕಡೆಗೆ ಮಾತ್ರ ವಿಶೇಷ ಗಮನವೀಯುತ್ತದೆ ಎಂದರು.

Advertisement
Advertisement

ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ ನಮ್ಮ ಪ್ರಗತಿ ನಿಸ್ಸಂಶಯವಾಗಿಯೂ ನಮ್ಮ ಕೈಯ್ಯಲ್ಲೇ ಇದೆ ಹೊರತು ಇತರ ಯಾವುದೇ ಮೂಲಗಳಲ್ಲಿ ಇಲ್ಲ ಎಂದರು.

ಪ್ರಾಂಶುಪಾಲ ಸೀತಾರಾಮ ಕೇವಳ , ಕಾಲೇಜಿನ ನಿಯಮಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಉಪ ಪ್ರಾಂಶುಪಾಲೆ ಶಶಿಕಲಾ ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾಕ್ಷಿ ಮತ್ತು ತಂಡದವರು ಪ್ರಾರ್ಥಿಸಿದರು.

Advertisement

ಉಪನ್ಯಾಸಕಿ ಜಯಶ್ರೀ ವಂದಿಸಿದರು. ಉಪನ್ಯಾಸಕ ಮಹಮ್ಮದ್ ತನ್ವೀರ್ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸವಣೂರು : ವಿದ್ಯಾರಶ್ಮಿಯಲ್ಲಿ ಪಿ.ಯು.ಸಿ. ತರಗತಿಗಳ ವಿದ್ಯಾರ್ಥಿಗಳ ಪ್ರವೇಶೋತ್ಸವ"

Leave a comment

Your email address will not be published.


*