ಸುಬ್ರಹ್ಮಣ್ಯದಲ್ಲಿ ನರಸಿಂಹ ಜಯಂತಿ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ

ಡಾ.ದೇವಿ ಪ್ರಸಾದ್ ಕಾನತ್ತೂರು ಅವರನ್ನು ಸನ್ಮಾನಿಸಲಾಯಿತು
Advertisement

ಸುಬ್ರಹ್ಮಣ್ಯ: ಸಮಾಜಕ್ಕೆ ಬೇಕಾದ ಒಳ್ಳೆಯ ಆಡಳಿತ ಸೂತ್ರ ಕೊಟ್ಟ ನರಸಿಂಹ 6 ಸಾವಿರ ಕೋಟಿ ವರ್ಷ ಸುದೀರ್ಘ ಮಾರ್ಗದರ್ಶನ  ಮಾಡಿದ. ಆದರೆ ಇಂದು 5 ವರ್ಷ ಸರಿಯಾಗಿ ಅಧಿಕಾರ ನಡೆಸಲು ಬರುವುದಿಲ್ಲ.  ಇದಕ್ಕೆ ಧರ್ಮದ ಅರಿಬಿನ ಕೊರತೆಯೇ ಕಾರಣ ಎಂದು ಮೈಸೂರಿನ ವಿದ್ವಾನ್ ಬೆ.ನಾ. ವಿಜಯೀಂದ್ರ ಆಚಾರ್ಯ ಹೇಳಿದರು.

Advertisement

ಅವರು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇದರ ಶ್ರೀ ನರಸಿಂಹ ಜಯಂತೀ ಮಹೋತ್ಸವದ ಅಂಗವಾಗಿ ಶುಕ್ರವಾರ ಮಠದಲ್ಲಿ ನಡೆದ ಶ್ರೀಮದಾನಂದತೀರ್ಥ ತತ್ತ್ವದರ್ಶಿನೀ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

Advertisement
Advertisement

ಕಾರ್ಯಕ್ರಮದಲ್ಲಿ ಆಶೀರ್ಚನ ನೀಡಿದ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಶ್ರೀ ಮಠವು ಕೇವಲ ಆಧ್ಯಾತ್ಮಿಕ ಕ್ಷೇತ್ರದ ಕಡೆಗೆ ಮಾತ್ರ ಒತ್ತು ನೀಡುತಿಲ್ಲ. ಸಂಶೋಧನ ಕೇಂದ್ರವನ್ನು ಹುಟ್ಟು ಹಾಕುವ ಮೂಲಕ ಸಂಶೋಧನಾ ಕೇತ್ರಕ್ಕೂ ಕೊಡುಗೆ ನೀಡುತ್ತಿದೆ. ಧಾರ್ಮಿಕ ಕ್ಷೇತ್ರದ ಹೊರತಾಗಿಯೂ ಮಠ ಸೇವೆ ನೀಡುತ್ತಿದೆ ಎಂದು  ಹೇಳಿದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು.

Advertisement

ಪಶುಸಂಗೋಪನ ಇಲಾಖೆಯ ಡಾ. ದೇವಿಪ್ರಸಾದ್ ಕಾನತ್ತೂರು, ಮುಖ್ಯ ಶಿಕ್ಷಕ ಕೃಷ್ಣಶರ್ಮ, ಉದ್ಯಮಿ ರವಿಕಕ್ಕೆಪದವು, ಎಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿನಿ, ಕೃಪಾ ಕೆ.ಆರ್, ಹಾಗೂ ಸಾಧನೆಗೈದ ಅನಂತ ಎಂ ಭಟ್, ಹವ್ಯಾ, ಸುದರ್ಶನ, ಪೂಜಾಜ, ಪುನೀತಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಠದ ದಿವಾನರಾದ ಸುದರ್ಶನ ಜೋಯಿಸ, ಕಲಾವಿದ ಯಜ್ಞೇಶ್ ಆಚಾರ್ಯ, ಮಠದ ಪುರೋಹಿತರು, ಭಕ್ತರು ಉಪಸ್ಥಿತರಿದ್ದರು.

Advertisement

ಬೆಂಗಳೂರು ವಿದ್ಯಾಪೀಠದ ಕಿರಣ ಆಚಾರ್ಯ, ಗೋಪಾಲಕೃಷ್ಣ ಪರ್ವತಮುಖಿ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

1 Comment on "ಸುಬ್ರಹ್ಮಣ್ಯದಲ್ಲಿ ನರಸಿಂಹ ಜಯಂತಿ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ"

  1. Vasanth ijiman | May 18, 2019 at 9:28 am | Reply

    Usefull news

Leave a comment

Your email address will not be published.


*