ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಬದಿ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿರುವ ಸ್ಥಳದಲ್ಲಿದ್ದ ಅಶ್ವತ್ಥ ಮರದ ಕೊಂಬೆ ಮುರಿದು ಬಿದ್ದು ಬಿಳಿನೆಲೆ ನಿವಾಸಿ ಹರಿಶ್ಚಂದ್ರ ಎಂಬವರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹರಿಶ್ಚಂದ್ರ ಅವರು ಕೆಲಸ ಮುಗಿಸಿ ಮನೆಗೆ ತೆರಳಲೆಂದು ಖಾಸಗಿ ವಾಹನ ನಿಲುಗಡೆಯ ಮರದ ಕೆಳಗೆ ವಾಹನಕ್ಕೆ ಕಾದು ನಿಂತಿದ್ದರು . ಇದೇ ವೇಳೆ ಮರದ ಕೊಂಬೆ ತುಂಡಾಗಿ ಬಿದ್ದು ಗಾಯಗೊಂಡಿದ್ದಾರೆ. ತಲೆಗೆ ಹಾಗು ಎಡ ಭುಜಕ್ಕೆ ತೀವ್ರಸ್ವರೂಪದ ಗಾಯಗಳಾಗಿದೆ. ಗಾಯಾಳುವನ್ನು ತಕ್ಷಣ ಆಂಬುಲೆನ್ಸ್ ವಾಹನದ ಮೂಲಕ ನಿಟ್ಟೆ ಸದಾನಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮರದ ಬುಡದಲ್ಲಿ ಅನೇಕ ಮಂದಿ ಇದ್ದು ಕೊಂಬೆ ಮುರಿಯುವ ಶಬ್ಧ ಕೇಳಿ ಅವರೆಲ್ಲರು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel