ಸುಬ್ರಹ್ಮಣ್ಯ ಕಾಲೇಜಿನಲ್ಲಿ ಪೋಷಕ-ವಿದ್ಯಾರ್ಥಿಗಳ ಸಮ್ಮಿಲನ

May 28, 2019
10:14 AM

ಸುಬ್ರಹ್ಮಣ್ಯ: ಕೇವಲ ವಿದ್ಯಾಲಯಕ್ಕೆ ಕಳುಹಿಸಿದರೆ ಪೋಷಕರ ಕರ್ತವ್ಯ ಮುಗಿಯುವುದಿಲ್ಲ ಬದಲಾಗಿ ಮಕ್ಕಳ ಬಗ್ಗೆ ನಿರಂತರ ಆಸ್ಥೆ ವಹಿಸಬೇಕು.ಅಲ್ಲದೆ ಮಕ್ಕಳಿಗೆ ಶಿಸ್ತಿನ ಅರಿವು ಸದಾ ಅನುರಣಿತವಾಗುವಂತೆ ಮಾಡಬೇಕು ಹಾಗಾದಾಗ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ  ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಪೋಷಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುಕ್ಕೆ ದೇವಳದ ವತಿಯಿಂದ ಕಾಲೇಜಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ನೀಡಲಾಗಿದೆ.ಅಲ್ಲದೆ ಶ್ರೀ ದೇವರ ವರಪ್ರಸಾದದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕಾಲೇಜಿನಲ್ಲಿ ನೆರವೇರಲಿದೆ.ಅಲ್ಲದೆ ವಿದ್ಯಾರ್ಥಿಗಳ ವಿದ್ಯಾರ್ಜನೆ ಇನ್ನಷ್ಟು ಆವಶ್ಯಕತೆಗಳನ್ನು ಆಡಳಿತ ಮಂಡಳಿ ಒದಗಿಸಲಿದೆ ಎಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ವರ ಡಿ.ಆರ್ ಮುಖ್ಯಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್,ಹಿರಿಯ ಉಪನ್ಯಾಸಕರಾದ ಎ.ಆರ್.ಮುಲ್ಲಾ, ಸೋಮಶೇಖರ ನಾಯಕ್, ಜಯಶ್ರೀ.ವಿ.ದಂಬೆಕೋಡಿ, ಮೋಹನ್ ಗೌಡ ಸೇರಿದಂತೆ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ನುಡಿ ಹರೆಯವನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಪೋಷಕರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಸಮಾಗಮ ನೆರವೇರಿತು.ನೂತನವಾಗಿ ಪ್ರಥಮ ಪಿಯುಸಿಗೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಕಾಲೇಜಿನ ಬಗ್ಗೆ, ಇಲ್ಲಿನ ಸವಲತ್ತುಗಳ ಬಗ್ಗೆ, ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಬಗ್ಗೆ ಮಾಹಿತಿ ನೀಡಲಾಯಿತು.

ಉಪನ್ಯಾಸಕ ಮೋಹನ ಗೌಡ ಸ್ವಾಗತಿಸಿದರು. ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್ ಪ್ರಸ್ತಾಪಿಸಿದರು.ಉಪನ್ಯಾಸಕಿ ಜ್ಯೋತಿ.ಪಿ.ರೈ ವಂದಿಸಿದರು. ಉಪನ್ಯಾಸಕಿ ಸುಧಾ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪತ್ರಕರ್ತ, ಕೃಷಿಕ : ಮಹೇಶ್ ಪುಚ್ಚಪ್ಪಾಡಿ
February 18, 2026
11:06 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05.11.2025 | ಎಲ್ಲೆಲ್ಲಾ ಮಳೆ ನಿರೀಕ್ಷೆ..? ನಿರೀಕ್ಷೆಯಂತೆ ಮಳೆಯಾಗದಿರಲು ಕಾರಣವೇನು..?
November 5, 2025
2:24 PM
by: ಸಾಯಿಶೇಖರ್ ಕರಿಕಳ
ಹಸಿರು ಹೈಡ್ರೋಜನ್ ಘಟಕ ಕಾರ್ಯಾಚರಣೆ | ಹಸಿರು ಇಂಧನ ಉತ್ಪಾದನೆಗೆ ಒತ್ತು
August 1, 2025
7:38 PM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror