ಸುಳ್ಯ: ವಿಶ್ವ ಹಿಂದೂ ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಆರನೇ ವರ್ಷದ ವೈಭವದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾ ಯಾತ್ರೆ ಸುಳ್ಯ ನಗರದಲ್ಲಿ ನಡೆಯಿತು.
Advertisement
ಸುಳ್ಯ ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದ ಅಟ್ಟಿ ಮಡಿಕೆಗಳನ್ನು 15 ಮಂದಿಯ ಯುವಕರ ತಂಡ ಆಕರ್ಷಕ ಪಿರಮಿಡ್ ರಚಿಸಿ ಒಡೆಯುವ ಸ್ಪರ್ಧೆ ನೋಡುಗರ ಮೈ ನವಿರೇಳಿಸಿತು. ಶ್ರೀಕೃಷ್ಣನ ಸುಂದರ ರಥದೊಂದಿಗೆ ಸಾಗಿದ ಶೋಭಾಯಾತ್ರೆಯಲ್ಲಿ ಯುವಕರ ತಂಡ ಸುಮಾರು 18 ಕಡೆಗಳಲ್ಲಿ ಸ್ಥಾಪಿಸಲಾದ ಅಟ್ಟಿ ಮಡಕೆಗಳನ್ನು ಒಡೆದರು.
Advertisement
ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಶೋಭಾಯಾತ್ರೆಗೆ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement