ಸುಳ್ಯದಲ್ಲಿ ಶಂಕರ ಜಯಂತಿ ಆಚರಣೆ

Advertisement
Advertisement
Advertisement

ಸುಳ್ಯ: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶಂಕರ ಜಯಂತಿ ಆಚರಣೆ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

Advertisement

ಶ್ರೀ ಶಂಕರಾಚಾರ್ಯ ಕಲ್ಪೋಕ್ತ ಪೂಜೆ ಮತ್ತು ಶಂಕರಾಚಾರ್ಯ ಅಸ್ಟೋತ್ತರ ಶತನಾಮಾವಳಿ ಪಠಣ ನಡೆಯಿತು. ಬಳಿಕ ಮಕ್ಕಳಿಗೆ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಮಹಿಳೆ ಮತ್ತು ಪುರುಷರಿಗೆ ಸೌಂದರ್ಯ ಲಹರಿ ಶ್ಲೋಕ ಸ್ಪರ್ಧೆ ನಡೆಯಿತು.

Advertisement

ಸ್ಥಾನಿಕ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ಗಿರಿಜಾಶಂಕರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಸೇವಾ ಸಂಘಟನೆಗಳು ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಗಿರಿಜಾ ಶಂಕರ ಹೇಳಿದರು.

ಕಾರ್ಯದರ್ಶಿ ಕೆ.ಆರ್.ಕೃಷ್ಣ ರಾವ್ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀಧರ ರಾವ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಕುಮಾರಸ್ವಾಮಿ ರೆಂಜಾಳ ಮತ್ತು ಅರುಣ್ ಕುಮಾರ್ ಎನ್, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಶ್ರೀಧರ ರಾವ್ ಸಹಕರಿಸಿದರು. ಸಮಾಜದ ಹಿರಿಯ ದಂಪತಿ ವಿಷ್ಣಯ್ಯ ಬೇರಿಕೆ ಮತ್ತು ಮಹಾಲಕ್ಷಿ ಅವರನ್ನು ಸಂಘದ ಪೂರ್ವಾಧ್ಯಕ್ಷರಾದ ಬಯಂಬು ಭಾಸ್ಕರ ರಾವ್, ಎ.ಭಾಸ್ಕರ ರಾವ್ ಮತ್ತು ಡಾ.ಸದಾಶಿವ ರಾವ್ ಸನ್ಮಾನಿಸಿದರು.
ಆಟೋಟ ಸ್ಪರ್ಧೆ, ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯದಲ್ಲಿ ಶಂಕರ ಜಯಂತಿ ಆಚರಣೆ"

Leave a comment

Your email address will not be published.


*