ಸುಳ್ಯ : ಎನ್ನೆಂಪಿಯುಸಿಯಲ್ಲಿ ಶ್ರದ್ಧಾಂಜಲಿ ಸಭೆ

ಸುಳ್ಯ : ಕೆ.ವಿ.ಜಿ ಕಾನೂನು ಕಾಲೇಜಿನ ಸ್ಥಾಪಕ ಪ್ರಾಚಾರ್ಯರು,ಕೆ.ವಿ.ಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಕುರುಂಜಿಯವರ ಆಪ್ತ ಒಡನಾಡಿಯಾಗಿದ್ದ ಪಡ್ಡಂಬೈಲು ವೆಂಕಟ್ರಮಣ ಗೌಡ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನವನ್ನು ಎನ್ನೆಂಸಿಯಲ್ಲಿ ಸಲ್ಲಿಸಲಾಯಿತು.

Advertisement

ಎನ್ನೆಂಸಿಯ ಗೌರವ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ಬಾಲಚಂದ್ರ ಗೌಡರು ಮಾತನಾಡಿ ಪಡ್ಡಂಬೈಲುರವರು ರಾಜಕೀಯ ಸಚ್ಚಾರಿತ್ರ್ಯ ಹೊಂದಿದ ವ್ಯಕ್ತಿಯಾಗಿದ್ದರು, ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಅವರ ಶ್ರಮ ಅಪಾರ,ಸಂಸ್ಥಾಪಕರ ಹೆಗಲಿಗೆ ಹೆಗಲು ಕೊಟ್ಟು ಈ ಸಂಸ್ಥೆಯ ಏಳಿಗೆಯಲ್ಲಿ ತೊಡಗಿಸಿಕೊಂಡವರು ಎಂದು ಹೇಳಿದರು.

Advertisement

ಎನ್ನೆಂಸಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪೂವಪ್ಪ ಕಣಿಯೂರು  ಮಾತನಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ನಾಟಕಕಾರರಾಗಿ , ಸಿನಿಮಾ ಕ್ಷೇತ್ರದಲ್ಲೂ ನಟರಾಗಿ ಹೆಸರು ವಾಸಿಯಾಗಿರುವ ಕಾರ್ನಾಡರದು ಬಹುಶ್ರುತ ವ್ಯಕ್ತಿತ್ವ-ಯಾವುದೇ ಕಾರಣಕ್ಕೂ ತನ್ನ ಸಿದ್ಧಾಂತ ಬಿಟ್ಟು ಕೊಟ್ಟವರಲ್ಲ ಎಂದರು.

ಎನ್ನೆಂಪಿಯುಸಿ ಪ್ರಾಂಶುಪಾಲೆ  ಹರಿಣಿ ಪುತ್ತೂರಾಯ ಮಾತನಾಡಿದರು. ಈ ಸಂದರ್ಭದಲ್ಲಿ ಎನ್ನೆಂಸಿ ಪ್ರಾಂಶುಪಾಲ ಡಾ.ಕೆ.ಗಿರಿಧರ ಗೌಡ,ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ.ಡಿ.ಜವರೇ ಗೌಡ ಉಪಸ್ಥಿತರಿದ್ದರು.

Advertisement

ಪಿಯು,ಪದವಿ ವಿಭಾಗದ ಬೋಧಕ-ಬೋಧಕೇತರ ವೃಂದ,ಪಿಯು ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪುಷ್ಪ ನಮನವನ್ನು ಅರ್ಪಿಸಲಾಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಸುಳ್ಯ : ಎನ್ನೆಂಪಿಯುಸಿಯಲ್ಲಿ ಶ್ರದ್ಧಾಂಜಲಿ ಸಭೆ"

Leave a comment

Your email address will not be published.


*