ಸುಳ್ಯ ಕ್ಷೇತ್ರದ ಮೂವರು ಗೆಲುವಿನತ್ತ

Advertisement

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದವರಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮೂರು ಮಂದಿ ನಾಯಕರು ಭರ್ಜರಿ ಗೆಲುವಿನತ್ತ ಮುನ್ನಡೆದಿದ್ದಾರೆ.

Advertisement

ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಕ್ಷೇತ್ತದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಸುಳ್ಯ ಕ್ಷೇತ್ರದವರಾಗಿದ್ದು ಬೇರೆ ಬೇರೆ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಿದ್ದಾರೆ. ಈ ಮೂವರು ಕೂಡ ಭರ್ಜರಿ ಗೆಲುವಿನತ್ತ ಮುನ್ನಡೆದಿದ್ದಾರೆ.

Advertisement
Advertisement

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರಾದ ಸದಾನಂದ ಗೌಡ ನಾಲ್ಕನೆ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾದ್ದಾರೆ. ಕಡಬ ತಾಲೂಕಿನ ಪಾಲ್ತಾಡಿ ಕುಂಜಾಡಿಯವರಾದ ನಳಿನ್ ಕುಮಾರ್ ಮೂರನೇ ಬಾರಿ ದ.ಕ.ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಡಬ ತಾಲೂಕಿನ ಚಾರ್ವಾಕದವರಾದ ಶೋಭಾ ಕರಂದ್ಲಾಜೆ ಎರಡನೇ ಬಾರಿ ಉಡುಪಿ-ಚಿಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ಸುಳ್ಯ ತಾಲೂಕಿನವರಾದ ಈ ಮೂವರು ಗೆಲುವಿನತ್ತ ಮುನ್ನಡೆದಿರುವುದು ಸುಳ್ಯ ಬಿಜೆಪಿಯಲ್ಲಿ ಸಂಭ್ರಮ ಇನ್ನಷ್ಟು ಹೆಚ್ಚಿಸಿದೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯ ಕ್ಷೇತ್ರದ ಮೂವರು ಗೆಲುವಿನತ್ತ"

Leave a comment

Your email address will not be published.


*