ಸುಳ್ಯ ತಾಲೂಕಿನಲ್ಲಿ ಮಳೆಯಬ್ಬರ : ಹಾನಿ ತಡೆಗೆ ಅಧಿಕಾರಿಗಳ ಚಿತ್ತ

August 6, 2019
3:58 PM

ಸುಳ್ಯ: ಸುಳ್ಯ ತಾಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರಿಸಿದೆ. ವಿವಿಧ ಕಡೆ ಜಲ ಸಂಕಷ್ಟ ತಂದೊಡ್ಡಿದೆ. ಸುಳ್ಯ ತಹಶೀಲ್ದಾರ್ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಹಾನಿಯಾಗದಂತೆ ತಡೆಯುವುದು  ಹಾಗೂ ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳು ಚಿತ್ತ ಹರಿಸಿದ್ದಾರೆ. ಕಡಬ ತಹಶೀಲ್ದಾರ್ ಅವರು ಕೂಡಾ ವಿವಿದೆಡೆ ಭೇಟಿ ನೀಡಿದ್ದ ಸುಬ್ರಹ್ಮಣ್ಯ ಸ್ನಾನ ಘಟ್ಟ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿದರು.

ಕಡಬ ತಾಲೂಕಿನ  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಟ್ಟ ಮುಳುಗಡೆಯಾದರೆ ಸುಳ್ಯದ ಕೇರ್ಪಳದಲ್ಲಿ ಕಂಪೌಂಡ್ ಗೋಡೆ ಕುಸಿತವಾಗಿದೆ. ಬೆಳ್ಳಾರೆ ರಸ್ತೆಯಲ್ಲಿ  ನೀರು ಹರಿದು ತಗ್ಗು ಪ್ರದೇಶದಲ್ಲಿ ನೀರು ಶೇಖರಣೆಗೊಂಡು ಸಂಕಷ್ಟ ತಂದಿದೆ. ಬಳ್ಳಕ್ಕ ಗುತ್ತಿಗಾರು ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸುಳ್ಯದ ಜಟ್ಟಿಪಳ್ಳ, ಹಳೆಗೇಟು ಬಳಿಯೂ ನೀರು ಹರಿದು ಸಂಕಷ್ಟವಾಗಿದೆ.

 

ಸುಳ್ಯದ ಹಳೆಗೇಟು ಬಳಿಯ ಪರಿಸ್ಥಿತಿ

 

ತಹಶೀಲ್ದಾರ್ ಭೇಟಿ:

ಸುಳ್ಯ ತಹಶೀಲ್ದಾರ್ ಕುಂಞೆ ಅಹಮ್ಮದ್ ಅವರು ವಿವಿಧ ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿ ತಾಲೂಕಿನ ಎಲ್ಲಾ ಅಧಿಕಾರಿ ಎಲರ್ಟ್ ಆಗಿರಲು ಸೂಚಿಸಿದರು. ಅಗತ್ಯಬಿದ್ದರೆ ಗಂಜಿ ಕೇಂದ್ರ ತೆರಯಲೂ ಸಿದ್ಧತೆ ನಡೆಸುವಂತೆ ಸೂಚಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಸ್ನಾನ ಘಟ್ಟಕ್ಕೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ತೆರಳಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ  ಸೂಚನೆ ನೀಡಿದರು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಯನಾಡಿನಲ್ಲಿ ಭೂಕುಸಿತದ ದುರಂತ | ಒಂದು ಬಲಿ , 7 ಮಂದಿ ನಾಪತ್ತೆ | ಇದು ಮಾನವ ನಿರ್ಮಿತ ದುರಂತ ಎಂದ ಸಚಿವ
July 7, 2026
3:44 PM
by: ದ ರೂರಲ್ ಮಿರರ್.ಕಾಂ
ವಯನಾಡಿನಲ್ಲಿ ಮತ್ತೆ ಭೂಕುಸಿತ ಭೀತಿ- ಸುರಂಗ ಯೋಜನಾ ಸ್ಥಳದಲ್ಲಿ ಮಣ್ಣು ಕುಸಿತ, ಹಲವರು ಸಿಲುಕಿರುವ ಶಂಕೆ
July 7, 2026
12:57 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-07-2026 | ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ – ಜುಲೈ 11 ರಿಂದ ಮಳೆ ತೀವ್ರ ಇಳಿಕೆ ಸಾಧ್ಯತೆ
July 7, 2026
12:25 PM
by: ಸಾಯಿಶೇಖರ್ ಕರಿಕಳ
ತೂಗುಸೇತುವೆಗಳ ಸರದಾರ ಡಾ. ಗಿರೀಶ್‌ ಭಾರದ್ವಾಜ್‌ ಅವರಿಗೆ ಗ್ರಾಮೀಣ ಭಾರತದ ಭಾವಪೂರ್ಣ ನಮನ
July 7, 2026
11:57 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror