ಸುಳ್ಯ: ಎಲ್ಲೆಲ್ಲೂ ಕಸ ತುಂಬಿ ನಾರುತ್ತಿರುವ ಸುಳ್ಯ ನಗರದ ಮೂಲೆ ಮೂಲೆಗಳಲ್ಲಿ ಸ್ವಚ್ಛತೆ ಕಾಪಾಡಲು ನಗರ ಪಂಚಾಯತ್ ಸದಸ್ಯರು ಆಸಕ್ತಿ ವಹಿಸುತ್ತಿದ್ದಾರೆ. ನೂತನ ಸದಸ್ಯರು #ಸ್ವಚ್ಛಸುಳ್ಯ ಕನಸು ಸಾಕಾರ ಮಾಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ. ಈಗ ನಾಗರಿಕರ ಸಹಕಾರ ಅಗತ್ಯವಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ವಹಿಸಬೇಕಿದೆ.
10ನೇ ವಾರ್ಡ್ ಸದಸ್ಯ ವಿನಯಕುಮಾರ್ ಕಂದಡ್ಕ ಕುರುಂಜಿಗುಡ್ಡೆಯಲ್ಲಿ ಕಸ ತುಂಬಿರುವ ಪ್ರದೇಶವನ್ನು ಸ್ವಚ್ಛ ಗೊಳಿಸಲು ವಿಶೇಷ ಆಸಕ್ತಿ ವಹಿಸಿ ಕ್ರಮ ತೆಗೆದುಕೊಂಡಿದ್ದಾರೆ. ಅದಾದ ಬೆನ್ನಲ್ಲೇ ಆದರೆ ಕಸ ಸ್ವಚ್ಛ ಮಾಡಿದ ಸ್ಥಳದಲ್ಲಿ ಮತ್ತೆ ಕಸದ ರಾಶಿ ಹಾಕಿರುವುದು ಕಂಡು ಬರುತ್ತದೆ. ಸ್ವಚ್ಛ ಗೊಂಡ ಸ್ಥಳದಲ್ಲಿ ಮತ್ತೆ ಕಸ ಹಾಕಿರುವ ಚಿತ್ರಗಳನ್ನು ವಿನಯಕುಮಾರ್ ಕಂದಡ್ಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ‘ ಇದು ಎಂತಾ ನಾಗರಿಕತೆ‘ ಎಂದು ಪ್ರಶ್ನಿಸಿ ಅವರು ಈ ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ.
ಸುಳ್ಯ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹಲವಾರು ತಿಂಗಳಿನಿಂದ ಕಸ ತುಂಬಿದ ಸ್ಥಳವನ್ನು ಸ್ವಚ್ಛ ಮಾಡಲು ಬೋರುಗುಡ್ಡೆ ಸದಸ್ಯ ಕೆ.ಎಸ್.ಉಮ್ಮರ್ ಆಸಕ್ತಿ ವಹಿಸಿದ್ದಾರೆ. ಬಸ್ ನಿಲ್ದಾಣದ ಕೆಳ ರಸ್ತೆಯ ಮೂಲಕ ಮುಂದಕ್ಕೆ ಹೋದರೆ ಮೂರು ರಸ್ತೆ ಸೇರುವ ಸ್ಥಳದಲ್ಲಿ ಕಸ ತುಂಬಿ ದುರ್ನಾತ ಬೀರುತ್ತಿತ್ತು. ನಗರ ಪಂಚಾಯತ್ ಆರೋಗ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಯಿಸಿ ತ್ಯಾಜ್ಯ ತೆರವು ಮಾಡಲು ಅವರು ಖಡಕ್ ಸೂಚನೆ ನೀಡಿದ್ದಾರೆ.
ಇದೇ ಮಾದರಿ ನಗರ ಪಂಚಾಯತ್ ಸದಸ್ಯರು ಎಲ್ಲಾ ಸದಸ್ಯರು ಆಸಕ್ತಯಿಂದ ಇದ್ದು ಅವರವರ ವಾರ್ಡ್ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ಜನರೂ ಸಹಕಾರ ನೀಡುವಂತೆ ಮಾಡುವ ಯೋಚನೆಯಲ್ಲಿದ್ದಾರೆ. ಹೀಗಾದರೆ #ಸ್ವಚ್ಛಸುಳ್ಯ ದ ಕನಸು ಸದ್ಯದಲ್ಲೇ ಸಾಕಾರವಾಗುವ ದಿನ ದೂರವಿಲ್ಲ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…