ಸುಳ್ಯ : ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ

Advertisement

ಸುಳ್ಯ:  ಮಾನವ ಇಂದು ಸ್ವಾರ್ಥಕ್ಕಾಗಿ ಪ್ರಕೃತಿಯ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿದ್ದಾನೆ. ಒಂದು ಮಿತಿಯವರೆಗೆ ಪ್ರಕೃತಿ ಮಾತೆ ತನ್ನ ಮೇಲಿನ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾಳೆ. ಮೇರೆ ಮಿರಿದಂತೆ ವಿಕೃತ ರೂಪ ತೋರುತ್ತಾಳೆ ಎಂದು ಸುಳ್ಯ ಎನ್ನೆಂಸಿಯ ರಸಾಯನಶಾಸ್ತ್ರ ಉಪನ್ಯಾಸಕಿ ಪ್ರಣಿತ ಬೆಳ್ಳೂರು ಹೇಳಿದರು

Advertisement

ಅವರು ನೆಹರು ಮೆಮೋರಿಯಲ್ ಪ.ಪೂ.ಕಾಲೇಜು ಸುಳ್ಯ ಇದರ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮರಗಳು ಹೀಗೆ ನಶಿಸುತ್ತಾ ಹೋದರೆ ಭವಿಷ್ಯದಲ್ಲಿ ಮುಂದೊಂದು ದಿನ ಆಕ್ಸಿಜನ್ ಸಿಲಿಂಡರ್ ಗಳನ್ನು ನೇತು ಹಾಕಿಕೊಂಡು ಜೀವನ ಸಾಗಿಸಬೇಕಾದ ದೌರ್ಭಾಗ್ಯ ನಮ್ಮದಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಪ್ರಾಂಶುಪಾಲೆ  ಹರಿಣಿ ಪುತ್ತೂರಾಯ ಇವರು ಸಭಾದ್ಯಕ್ಷತೆ ವಹಿಸಿ ಪರಿಸರ ಕಾಳಜಿಯನ್ನು ಎಲ್ಲರೂ ವಹಿಸಬೇಕೆಂದು ಕರೆ ನೀಡಿದರು.

Advertisement
Advertisement

ವೇದಿಕೆಯಲ್ಲಿ ವಿ.ಕ್ಷೇಮಾಧಿಕಾರಿ ಲಕ್ಷ್ಮಣ್ ಏನೇಕಲ್ ,ಕಾರ್ಯಕ್ರಮ ಸಂಯೋಜಕರಾದ ದಾಮೋದರ ಪಿ ,ರತ್ನಾವತಿ ಬಿ, ಕು.ವಿನುತ ಕೆ.ಎನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರದ್ಯುಮ್ನ,ಶ್ರೀಶ ನಾರಾಯಣ ಎ ಪರಿಸರ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ರಾಜಿತ ಪ್ರಾರ್ಥಿಸಿದರು, ನವ್ಯಕೃಷ್ಣ ಕೆ.ಎಸ್ ಸ್ವಾಗತಿಸಿ, ಅನಘ ಆರ್ ಯು,ನಂದಿತ ಎಂ.ವಿ,ಚರೀಷ್ಮ ಡಿ.ಎಸ್,ಅಕ್ಷತ ಎಸ್ ಪರಿಸರ ಗೀತೆ ಹಾಡಿದರು. ಪೃಥ್ವಿಶ್ರೀ ಕೆ ಅತಿಥಿಗಳನ್ನು ಪರಿಚಯಿಸಿದರು. ಕೌಶಿಕ್ ಕುರುಂಜಿ ವಂದಿಸಿದರು. ಜ್ಞಾನೇಶ್ ಕೆ.ಜೆ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಭಾಷಣ, ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಪ್ರಾಂಶುಪಾಲರು ಬಹುಮಾನ ವಿತರಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯ : ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ"

Leave a comment

Your email address will not be published.


*