ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಡ್ಡಂಬೈಲು ವೆಂಕಟ್ರಮಣ ಗೌಡರಿಗೆ ಶ್ರದ್ಧಾಂಜಲಿ

Advertisement

ಸುಳ್ಯ: ಜೂ.8 ರಂದು ನಿಧನರಾದ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಡ್ಡಂಬೈಲು ವೆಂಕಟ್ರಮಣ ಗೌಡರಿಗೆ ಶ್ರದ್ಧಾಂಜಲಿ ಸಭೆಯು ಸುಳ್ಯ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

Advertisement

ಸಭೆಯಲ್ಲಿ ಕೆ.ಪಿಸಿ.ಸಿ ಕಾರ್ಯದರ್ಶಿ ಟಿ.ಎಂ. ಶಹೀದ್ ಮಾತನಾಡಿ ಸುಳ್ಯ ಕಾಂಗ್ರೆಸ್ ಪಕ್ಷ ದಲ್ಲಿ ಕಾರ್ಯಕರ್ತ ರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಿದ ಇವರು ಪಕ್ಷಕ್ಕಾಗಿ ಆಹೋರಾತ್ರಿ ದುಡಿದವರು.ಸಮಾಜಕ್ಕಾಗಿ ಅಭಿವೃದ್ಧಿ ಕೆಲಸವನ್ನು ಮಾಡಲು ಅವಿರತವಾಗಿ ಶ್ರಮಿಸಿದರು.ಸುಳ್ಯ ನಗರದಲ್ಲಿ ಶಿಕ್ಷಣವನ್ನು ನೀಡಿದ ಇವರು ಉತ್ತಮ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ಶಿಕ್ಷಣ ಸಂಸ್ಥೆಗೆ ಪ್ರೇರಣೆಯಾದವರು ಎಂದು ಸ್ಮರಿಸಿದರು.

Advertisement
Advertisement

ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ .ಜಯರಾಂ ಮಾತನಾಡಿ ಗ್ರಾಮೀಣಾಭಿವೃದ್ಧಿಯಲ್ಲಿ ಪಡ್ಡಂಬೈಲು ವೆಂಕಟ್ರಮಣರವರ ಸೇವೆ ಅವಿಸ್ಮರಣೀಯ ರಸ್ತೆ ,ಸೇತುವೆ ,ಮೂಲಭೂತ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಶ್ರಮಿಸಿದ ಇವರು ನಿರಂತರವಾಗಿ ಬಡವರ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಿದವರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಕಾಮತ್ ಮಾತನಾಡಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಗಿ ದುಡಿದ ಇವರು ಪ್ರತಿಯೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಶ್ರಮ ವಹಿಸಿದವರು ಇವರು ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ರಾಗಿ ಕೃಷಿ ಕರಾಗಿ ಸಮಾಜ ಸೇವಕರಾಗಿ ರಾಜಕೀಯ ನೇತಾರ ರಾಗಿ ಸಮಾಜಕ್ಕೆ ಕೊಡುಗೆ ನೀಡಿದವರು.

Advertisement

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಎಸ್ .ಗಂಗಾಧರ್ ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಕೆ.ಎಂ.ಮುಸ್ತಫಾ , ನಂದರಾಜ್ ಸಂಕೇಶ್,ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕೆರಿ,ಸುಧೀರ್ ರೈ ಮೇನಾಲ, ಬೀರಾ ಮೊಯಿದಿನ್, ದಿನೇಶ್ ಅಂಬೆಕಲ್ಲು,ಶ್ರೀ ಹರಿ ಕುಕ್ಕೆಡೇಲು, ಪವಾಜ್ ಕನಕಮಜಲು,ಶಾಫಿ ಕುತ್ತಮೊಟ್ಟೆ ,ತಾಜುದ್ದೀನ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿಧನ ರಾದ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಮತ್ತು ಕಾಂಗ್ರೆಸ್ ಕಾರ್ಯಕರ್ತ ಇಬ್ರಾಹಿಂ ಹಳೆಗೇಟು ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಡ್ಡಂಬೈಲು ವೆಂಕಟ್ರಮಣ ಗೌಡರಿಗೆ ಶ್ರದ್ಧಾಂಜಲಿ"

Leave a comment

Your email address will not be published.


*