ಸೆ.22 : ಬಾಳಿಲದಲ್ಲಿ ಬಲರಾಮ ಜಯಂತಿ , ವಿಚಾರಗೋಷ್ಠಿ

September 21, 2019
8:14 PM

ಬಾಳಿಲ: ಭಾರತೀಯ ಕಿಸಾನ್ ಸಂಘದ ವತಿಯಿಂದ ಸೆ.22 ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ವಠಾರದಲ್ಲಿ ಬೆಳಗ್ಗೆ 10 ರಿಂದ ಬಲರಾಮ ಜಯಂತಿ ಹಾಗೂ 16 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ, ಗುತ್ತಿಗಾರು-ನಾಲ್ಕೂರು , ಎಣ್ಮೂರು ಇವುಗಳ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಪ್ರಭಾಕರ ರೈ ವಹಿಸುವರು. ಅತಿಥಿಗಳಾಗಿ ಕೃಷಿಕ ಕಡಮಜಲು ಸುಭಾಶ್ ರೈ ಭಾಗವಹಿಸುವರು.

ಸಭಾಕಾರ್ಯಕ್ರಮದ ಬಳಿಕ ಮಾಡಾವು 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಪೂರ್ಣಗೊಳಿಸುವ ಬಗ್ಗೆ  ಹೋರಾಟ ಹಾಗೂ ಪರಿಣಾಮಗಳ ವಿಚಾರಗೋಷ್ಠಿ ನಡೆಯಲಿದೆ. ರಮೇಶ್ ಕೋಟೆ ಹಾಗೂ ಜಯಪ್ರಸಾದ್ ಜೋಶಿ ವಿಚಾರ ಮಂಡಿಸಲಿದ್ದಾರೆ. ಇದೇ ಸಂದರ್ಭ ಸದಾಶಿವ ನಾಯಕ್, ರುಕ್ಮಯ್ಯ ಗೌಡ, ಭಾನುಪ್ರಕಾಶ್ ಮರುಂಗಳ ಅವರಿಗೆ ಸನ್ಮಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.  ಈ ಸಂದರ್ಭ ಶ್ರೀ ಎಂಟರ್ ಪ್ರೈಸಸ್ ಇವರಿಂದ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಮಕೂರಿನಲ್ಲಿ ಅಡಿಕೆ ಕ್ರಾಂತಿ -ತೆಂಗಿನ ತೋಟಗಳ ಜಾಗದಲ್ಲಿ ಅಡಿಕೆ ಬೆಳೆ..! 94 ಸಾವಿರ ಹೆಕ್ಟೇರ್‌ ದಾಟಿದ ವಿಸ್ತೀರ್ಣ
June 14, 2026
12:52 PM
by: ದ ರೂರಲ್ ಮಿರರ್.ಕಾಂ
ಬ್ರಿಕ್ಸ್ ‘ಇಂದೋರ್ ಘೋಷಣೆ’ ಅಂಗೀಕಾರ – ಜಾಗತಿಕ ಕೃಷಿ ಸಹಕಾರಕ್ಕೆ ಹೊಸ ದಿಕ್ಕು
June 14, 2026
6:54 AM
by: ದ ರೂರಲ್ ಮಿರರ್.ಕಾಂ
ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?
June 13, 2026
1:49 PM
by: ಮಹೇಶ್ ಪುಚ್ಚಪ್ಪಾಡಿ
ಜಾಗತಿಕ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಐತಿಹಾಸಿಕ ದರ – ಕೆಜಿಗೆ ₹300 ಗಡಿ ದಾಟಿದ ಬೆಲೆ, ಭಾರತದಲ್ಲಿ RSS-4 ರಬ್ಬರ್‌ ಗೆ ಏರಿಕೆ
June 13, 2026
7:41 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror