ಮತ್ತೆ ಇಳಿಕೆಯಾದ ರಬ್ಬರ್‌ ಬೆಲೆ – ರಬ್ಬರ್ ಬೆಳೆಗಾರರಿಗೆ ಮತ್ತೆ ಬೆಲೆ ಇಳಿಕೆಯ ಆತಂಕ

November 23, 2026
11:03 AM
ನವೆಂಬರ್ ಮೊದಲ ವಾರದಲ್ಲಿ ಕೆ.ಜಿ.ಗೆ ₹300 ತಲುಪಿದ್ದ ಆರ್‌ಎಸ್‌ಎಸ್‌-4 ರಬ್ಬರ್ ಬೆಲೆ ಮೂರು ವಾರಗಳಲ್ಲಿ ₹261ಕ್ಕೆ ಇಳಿದಿದೆ. ಉತ್ಪಾದನೆ ಹೆಚ್ಚಳ ಮತ್ತು ಟೈರ್ ಕಂಪನಿಗಳ ಖರೀದಿ ನಿರಾಸಕ್ತಿ ಬೆಲೆ ಕುಸಿತಕ್ಕೆ ಕಾರಣವಾಗಿದ್ದು, ರಬ್ಬರ್ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
Rubber tapper collecting latex in a natural rubber plantation

ರಬ್ಬರ್ ಬೆಲೆಯಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಏರಿಕೆಯ ಸಂಭ್ರಮ ಹೆಚ್ಚು ದಿನ ಉಳಿದಿಲ್ಲ. ನವೆಂಬರ್ ಮೊದಲ ವಾರದಲ್ಲಿ ಪ್ರತಿ ಕೆ.ಜಿ.ಗೆ ₹300ರ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ್ದ ರಬ್ಬರ್ ಧಾರಣೆ ಇದೀಗ ಮತ್ತೆ ಇಳಿಕೆಯ ಹಾದಿ ಹಿಡಿದಿದೆ. ಕೇವಲ ಮೂರು ವಾರಗಳ ಅವಧಿಯಲ್ಲಿ ಪ್ರತಿ ಕೆ.ಜಿ.ಗೆ ಸುಮಾರು ₹39 ಕುಸಿತವಾಗಿದ್ದು, ರಬ್ಬರ್ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

Advertisement

ಕೇರಳದ ಕೊಟ್ಟಾಯಂನಿಂದ ಪ್ರಕಟವಾದ ವರದಿಯ ಪ್ರಕಾರ, ನವೆಂಬರ್ 1ರಂದು ಆರ್‌ಎಸ್‌ಎಸ್‌-4 ರಬ್ಬರ್ ಬೆಲೆ ಪ್ರತಿ ಕೆ.ಜಿ.ಗೆ ₹300 ತಲುಪಿತ್ತು. ಸ್ಥಳೀಯವಾಗಿ 298 ರೂಪಾಯಿವರೆಗೂ ತಲಪಿತ್ತು. ಆದರೆ ನವೆಂಬರ್ 16ರ ವೇಳೆಗೆ ರಬ್ಬರ್ ಮಂಡಳಿಯ ಬೆಲೆ ₹288ಕ್ಕೆ ಇಳಿಕೆಯಾಗಿತ್ತು, ಇದೀಗ ನ.23 ರಂದು 261 ರೂಪಾಯಿಗೆ ಇಳಿಕೆಯಾಗಿದೆ. ಉತ್ಪಾದನಾ ವೆಚ್ಚ ಮತ್ತು ಕಾರ್ಮಿಕರ ಕೂಲಿ ಕಳೆದ ಬಳಿಕ ಉತ್ತಮ ಆದಾಯ ನಿರೀಕ್ಷಿಸಿದ್ದ ಬೆಳೆಗಾರರಿಗೆ ಈ ಬೆಲೆ ಕುಸಿತ ನಿರಾಸೆ ಮೂಡಿಸಿದೆ.

ಬೆಲೆ ಏರಿಕೆಗೆ ಕಾರಣವಾಗಿದ್ದ ಉತ್ಪಾದನೆ ಕುಸಿತ :  ಥಾಯ್ಲೆಂಡ್, ಮಲೇಷ್ಯಾ ಸೇರಿದಂತೆ ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿ ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಶೇ.30ಕ್ಕಿಂತಲೂ ಹೆಚ್ಚು ಕುಸಿದಿತ್ತು. ಭಾರತದಲ್ಲಿಯೂ ಉತ್ಪಾದನೆ ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಪೂರೈಕೆ ಒತ್ತಡ ಉಂಟಾಗಿ ಬೆಲೆ ಏರಿಕೆಯಾಗಿತ್ತು.

ಇದಲ್ಲದೆ, ಕೆಲವು ಬೆಳೆಗಾರರು ರಬ್ಬರ್ ಶೀಟ್ ಬದಲಿಗೆ ಲ್ಯಾಟೆಕ್ಸ್ ರೂಪದಲ್ಲಿ ಮಾರಾಟ ಮಾಡಲು ಆರಂಭಿಸಿದ್ದು, ಹಾಳೆ ರಬ್ಬರ್ ಬೆಲೆ ಏರಿಕೆಗೆ ಕಾರಣವಾಗಿತ್ತು. ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯೂ ಬೆಳೆಗಾರರಲ್ಲಿ ಮೂಡಿತ್ತು.‌

ಆದರೆ ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆಯಾಗಿ ಟ್ಯಾಪಿಂಗ್ ಚಟುವಟಿಕೆ ಮತ್ತು ಉತ್ಪಾದನೆ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವೆಂದು ವರದಿ ತಿಳಿಸಿದೆ.

ಟೈರ್ ಕಂಪನಿಗಳ ಖರೀದಿ ನಿರಾಸಕ್ತಿ :  ದೇಶೀಯ ಮಾರುಕಟ್ಟೆಯಲ್ಲಿ ಟೈರ್ ಕಂಪನಿಗಳು ರಬ್ಬರ್ ಖರೀದಿಯಿಂದ ಹಿಂದೆ ಸರಿದಿರುವುದು ಮತ್ತೊಂದು ಬೆಳವಣಿಗೆಯಾಗಿದೆ. ವಿದೇಶಗಳಿಂದ ರಬ್ಬರ್ ತರಿಸಿಕೊಳ್ಳಲು ಹಡಗುಗಳ ಸಂಚಾರದಲ್ಲಿ ಉಂಟಾಗಿರುವ ಅಡಚಣೆಗಳ ಹಿನ್ನೆಲೆಯಲ್ಲಿ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿಯೂ ಖರೀದಿಯನ್ನು ಕಡಿಮೆ ಮಾಡಿವೆ ಎಂದು ವರದಿ ಉಲ್ಲೇಖಿಸಿದೆ.

ಟೈರ್ ಕಂಪನಿಗಳು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ ಎಂಬ ಅಭಿಪ್ರಾಯವನ್ನೂ ವರದಿ ಮುಂದಿಟ್ಟಿದೆ. ಇದರಿಂದ ದೇಶೀಯ ರಬ್ಬರ್ ಉತ್ಪಾದಕರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯುವ ಕುರಿತು ಪ್ರಶ್ನೆಗಳು ಎದುರಾಗಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಿಂತ ಭಾರತದಲ್ಲಿ ಉತ್ತಮ ಬೆಲೆ : ಬೆಲೆ ಇಳಿಕೆಯಾಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೋಲಿಸಿದರೆ ಭಾರತದಲ್ಲಿ ರಬ್ಬರ್‌ಗೆ ಉತ್ತಮ ಧಾರಣೆ ದೊರೆಯುತ್ತಿದೆ. ವರದಿಯ ಪ್ರಕಾರ ಕೆಲ ದಿನಗಳ ಹಿಂದೆ ಬ್ಯಾಂಕಾಕ್ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್‌-4 ರಬ್ಬರ್ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹257 ಇತ್ತು.

ರಬ್ಬರ್ ಬೆಲೆಯಲ್ಲಿ ಕಂಡುಬರುತ್ತಿರುವ ಈ ಏರಿಳಿತವು ಉತ್ಪಾದನಾ ವೆಚ್ಚ, ಟ್ಯಾಪಿಂಗ್ ಕಾರ್ಮಿಕರ ಕೂಲಿ ಮತ್ತು ಮಾರುಕಟ್ಟೆ ಬೇಡಿಕೆಯನ್ನು ಅವಲಂಬಿಸಿರುವ ಬೆಳೆಗಾರರ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಬೆಳೆಗಾರರ ಮುಂದಿರುವ ಪ್ರಶ್ನೆ :  ರಬ್ಬರ್ ಬೆಲೆ ₹300ರ ಗಡಿ ದಾಟಿದಾಗ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಟ್ಯಾಪಿಂಗ್ ಆರಂಭಿಸಿದ್ದ ಹಾಗೂ ಉತ್ಪಾದನೆ ಹೆಚ್ಚಿಸಲು ಮುಂದಾಗಿದ್ದ ಬೆಳೆಗಾರರಿಗೆ ಈಗಿನ ಕುಸಿತ ಆತಂಕ ಮೂಡಿಸಿದೆ. ಬೆಲೆ ಮತ್ತಷ್ಟು ಇಳಿಯುತ್ತದೆಯೇ ಅಥವಾ ಮಾರುಕಟ್ಟೆ ಸ್ಥಿರಗೊಳ್ಳುತ್ತದೆಯೇ ಎಂಬುದರ ಮೇಲೆ ಬೆಳೆಗಾರರ ಮುಂದಿನ ನಿರ್ಧಾರಗಳು ಅವಲಂಬಿತವಾಗಿವೆ.

Rubber prices have declined sharply, causing concern among growers. RSS-4 rubber, which reached a record ₹300 per kg on November 1, fell to ₹261 by November 23, marking a drop of around ₹39 in three weeks. Increased production following improved weather conditions and reduced buying by tyre companies have contributed to market pressure. Although Indian prices remain higher than international rates, the decline has disappointed growers who were expecting better returns.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಬ್ರಾಯ ಚೊಕ್ಕಾಡಿ ಅವರಿಗೆ ‘ಮೋಹನ ಮುರಳಿ ಕವಿಸಮ್ಮಾನ’ ಪ್ರದಾನ
November 21, 2026
8:36 PM
by: ದ ರೂರಲ್ ಮಿರರ್.ಕಾಂ
ಕಲ್ಮಡ್ಕದಲ್ಲೂ ಶುರುವಾಯಿತು ಸ್ವಚ್ಛತಾ ಆಂದೋಲನ – ಯುವಶಕ್ತಿಗೆ ಗ್ರಾಮಸ್ಥರ ಸಾಥ್!
November 21, 2026
8:19 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.11.2026 | ನವೆಂಬರ್ 23ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ | ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಿಗೆ ಹಿಂಗಾರು ಮಳೆ ಮುನ್ಸೂಚನೆ
November 21, 2026
1:59 PM
by: ಸಾಯಿಶೇಖರ್ ಕರಿಕಳ
Free notebook distribution for Karnataka government school students
ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ನೋಟ್‌ಬುಕ್ – ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ
November 21, 2026
11:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror