ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ‘ಮೋಹನ ಮುರಳಿ ಕವಿಸಮ್ಮಾನ’ ಪ್ರದಾನ ಮಾಡಲಾಗುತ್ತಿದೆ. ಸುಳ್ಯ ಸಮೀಪದ ಬೊಕ್ಕಾಡಿಯ ಶ್ರೀರಾಮ ದೇವಾಲಯದ ದೇಸೀ ಸಭಾಭವನದಲ್ಲಿ ಸಮ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸುಬ್ರಾಯ ಚೊಕ್ಕಾಡಿ ಅವರು ನೀಡಿರುವ ಕೊಡುಗೆ ಹಾಗೂ ಅವರ ಕಾವ್ಯಸಾಧನೆಯನ್ನು ಗೌರವಿಸುವ ಉದ್ದೇಶದಿಂದ ನ.22ರಂದು ಸಂಜೆ ನಡೆಯಲಿದೆ. ಈ ಸಮ್ಮಾನವನ್ನು ನೀಡಲಾಗುತ್ತಿದೆ. ಗೋಪಾಲಕೃಷ್ಣ ಅಡಿಗ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ಗೌರವ ಕಾರ್ಯಕ್ರಮವು ಡಾ.ನರೇಂದ್ರ ರೈ ದೇರ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಬರಹಗಾರ ಗೋಪಾಲಕೃಷ್ಣ ಕುಂಟಿನಿ ಅತಿಥಿಗಳಾಗಿ ಭಾಗವಹಿಸುವರು.
ಗೋಪಾಲಕೃಷ್ಣ ಅಡಿಗ ಟ್ರಸ್ಟ್ ವತಿಯಿಂದ ಶ್ರೀರಾಮ ಸೇವಾ ಸಮಿತಿ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ನ ಡಾ.ಪ್ರದ್ಯುಮ್ನ ಹಾಗೂ ಎಂ ಜಯರಾಮ ಅಡಿಗ ಮತ್ತು ಶ್ರೀರಾಮ ಸೇವಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel


