ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ನವೆಂಬರ್ 22ರವರೆಗೆ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತವು ಶಿಥಿಲಗೊಳ್ಳುವ ಅಂತಿಮ ಹಂತದಲ್ಲಿದ್ದು, ಇದರೊಂದಿಗೆ ರಾಜ್ಯದಲ್ಲಿ ಚಳಿಯ ಪ್ರಮಾಣವೂ ನಿಧಾನವಾಗಿ ಕಡಿಮೆಯಾಗುವ ಲಕ್ಷಣಗಳಿವೆ.
ನವೆಂಬರ್ 23ರಿಂದ ಹಿಂಗಾರು ಮಾರುತ ಚುರುಕು
ಬಂಗಾಳಕೊಲ್ಲಿಯಿಂದ ನ.23ರಿಂದ ಹಿಂಗಾರು ಮಾರುತಗಳು ಚುರುಕಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಮತ್ತೆ ಮಳೆಯ ವಾತಾವರಣ ಆರಂಭವಾಗುವ ಲಕ್ಷಣಗಳಿವೆ.
ನ.23ರಿಂದ 27ರವರೆಗೆ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿಯೂ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ನವೆಂಬರ್ 27ರಂದು ಮತ್ತೊಂದು ವಾಯುಭಾರ ಕುಸಿತದ ಸಾಧ್ಯತೆ
ನ. 27ರಂದು ಉತ್ತರ ಸುಮಾತ್ರ ಕರಾವಳಿಯಿಂದ ಶ್ರೀಲಂಕಾದ ದಕ್ಷಿಣ ಕರಾವಳಿಯ ಕಡೆಗೆ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ.
ಪ್ರಸ್ತುತ ಮುನ್ಸೂಚನೆಯಂತೆ ಇದೇ ಉತ್ತರ ಸುಮಾತ್ರ ಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿಯೂ ವಾಯುಭಾರ ಕುಸಿತಗಳ ಸರಣಿ ಆರಂಭವಾಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಈ ಹವಾಮಾನ ವ್ಯವಸ್ಥೆಗಳ ಚಲನೆಯು ರಾಜ್ಯದ ಹಿಂಗಾರು ಮಳೆಯ ಮೇಲೆ ಪರಿಣಾಮ ಬೀರಬಹುದು.
Dry weather will continue across Karnataka until November 22. As Cyclone Aqvan weakens, temperatures are likely to gradually rise. Northeast monsoon activity is expected to strengthen from November 23, bringing rainfall to most parts of South Interior Karnataka, Malnad and Coastal Karnataka until November 27. Isolated rainfall is also possible in North Interior Karnataka. Another low-pressure system may develop near the northern Sumatra coast on November 27, with further systems possible during December.


