ಸುಳ್ಯ: ಸುಳ್ಯ ತಹಶಿಲ್ದಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ” ಸ್ವಚ್ಛ ಸುಳ್ಯ” ಎಂಟನೇ ಅಭಿಯಾನವು ಪೂರ್ಣಗೊಂಡಿದೆ.
ಈ ಕಾರ್ಯಕ್ಕೆ ಇದೀಗ ವಿವಿಧ ಸಂಘ ಸಂಸ್ಥೆಗಳ ಸಹಕಾರ ಲಭ್ಯವಾಗಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಅಭಿಯಾನದಲ್ಲಿ ಒಂದು ತಂಡ ಸರಕಾರಿ ಆಸ್ಪತ್ರೆ ,ಶ್ರೀ ರಾಂ ಪೇಟೆ ಬಳಿಯಿಂದ ಸಾಗಿ ವಿವೇಕಾನಂದ ವೃತ್ತದವರೆಗೂ ನಡೆಯಿತು.
ಇನ್ನೊಂದು ತಂಡ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ರಥಬೀದಿಯಲ್ಲಿ ಸಾಗಿ ಅಂಬಟಡ್ಕ ಹಾಗು ಕೆವಿಜಿ ಆಯುರ್ವೇದ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು.
ಲಯನ್ಸ್ ಕ್ಲಬ್ ಸುಳ್ಯ,ಬೆನಕ ಕ್ರೀಡಾ ಸಂಘ,ಪಯಸ್ವನಿ ಯುವತಿ ಮಂಡಲ,ಗ್ರಹ ರಕ್ಷಕ ದಳ ಸುಳ್ಯ,ಮಾರ್ನಿಂಗ್ ಕ್ರಿಕೆಟ್ ಕ್ಲಬ್ ,ಮಹಿಳಾ ಸಮಾಜ ಸುಳ್ಯ,ರೋಟರಿ ಕ್ಲಬ್ ಸುಳ್ಯ ವರ್ತಕರ ಸಂಘ,ಕಟ್ಟಡ ಕಾರ್ಮಿಕರ ಸಂಘ ಹಾಗು ಹಲವಾರು ಸಂಘ ಸಂಸ್ಥೆಗಳು ಪಾಲ್ಗೊಂಡು ಸ್ವಚ್ಛ ಸುಳ್ಯ ಅಭಿಯಾನವನ್ನು ಯಶಸ್ವಿಗೊಳಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel