ಗುತ್ತಿಗಾರು: ಹರಿಹರ ಪಳ್ಳತ್ತಡ್ಕ ಹಾಗೂ ಸುತ್ತಮುತ್ತಲ ಜನತೆ ಸರಕಾರಿ ಸಾಮ್ಯದ ಬಿಎಸ್ಎನ್ಎಲ್ ಮೊಬೈಲ್ ಸೇವೆಯನ್ನು ಅವಲಂಬಿತರಾಗಿದ್ದು ಇದೀಗ ಅವ್ಯವಸ್ಥೆ ಹಿನ್ನೆಲೆಯಲ್ಲಿ ತರಕಾರಿ ಬಳ್ಳಿಗಳನ್ನು ಹರಿಯ ಬಿಡುವ ವಿನೂತನ ಪ್ರತಿಭಟನೆಗೆ ಸಿದ್ಧತೆ ನಡೆಯಲಿದೆ.
ಹರಿಹರದಲ್ಲಿ ಈಗ ಕಾರ್ಯಚರಿಸುತ್ತಿರುವ ಟವರ್ ಬಹುತೇಕ ಅವಧಿಯಲ್ಲಿ ಸೇವೆಗೆ ದೊರಕುತಿಲ್ಲ.ಕರೆಂಟು ಇಲ್ಲದಾಗ ಕಣ್ಮರೆಯಾಗುತಿದ್ದ ಸಿಗ್ನಲ್ ಇತ್ತೀಚೆಗೆ ಕರೆಂಟು ಇದ್ದಾಗಲು ಇರುತಿಲ್ಲ.ರಾತ್ರಿ ಎಂಟರ ಆಸುಪಾಸಿನ ವೇಳೆಗೆ ನಿತ್ಯವೂ ಮೊಬೈಲ್ ಸ್ತಗಿತಗೊಳ್ಳುತ್ತಿದೆ.ಗುಡುಗು.ಮಿಂಚು ಇಲ್ಲದೆ ಶುಭ್ರ ವಾತಾವರಣವಿದ್ದು .ಕರೆಂಟು ಇದ್ದರು ನೆಟ್ ವರ್ಕು ಸ್ತಗಿತವಾಗುತ್ತಿರುವ ಉದ್ದೇಶ ಬಳಕೆದಾರರಿಗೆ ಅರಿಯದಾಗಿದೆ.ಈ ಕುರಿತು ನಿಗಮದ ಅಧಿಕಾರಿಗಳನ್ನು ಹಲವು ಬಾರಿ ವಿಚಾರಿಸಲಾಗಿದೆ. ಹಾಗಿದ್ದರೂ ಇನ್ನೂ ಸರಿಯಾಗಲ್ಲ. ಹೀಗಾಗಿ ಉಪಯೋಗಕ್ಕೆ ಬಾರದ ಟವರಿನ ಸೇವೆಯಲ್ಲಿನ ಲೋಪ ಖಂಡಿಸಿ. ಅಧಿಕಾರಿಗಳಿಗೆ , ಜನಪ್ರತಿನಿಧಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಇನ್ನೆರಡು ದಿನದೊಳಗೆ ಸೂಕ್ತ ಕ್ರಮ ಜರಗಿಸದೇ ಹೋದಲ್ಲಿ ಜೂ.18ಕ್ಕೆ ಮಂಗಳವಾರ 10-00ಕ್ಕೆ ಟವರಿಗೆ ತರಕಾರಿ ಬಳ್ಳಿಗಳನ್ನು ಹರಿಯ ಬಿಡುವ ವಿನೂತನ ಪ್ರತಿಭಟನೆ ನಡೆಯಲಿದೆ ಎಂದು ಬಳಕೆದಾರರು ಹೇಳಿದ್ದಾರೆ.