ಹಾಲಿವುಡ್ ಗೆ ಲಗ್ಗೆ ಇಟ್ಟ ಕರಾವಳಿ ಕನ್ನಡಿಗ ನಕಾಶ್ ಅಝೀಝ್

October 29, 2019
7:15 AM

ಕರಾವಳಿಯ ಕೀರ್ತಿ ಪತಾಕೆಯನ್ನು ಹಾಲಿವುಡ್ ನಲ್ಲಿ ಹಾರಿಸಲು ಮುಂದಾದ ಕರಾವಳಿ ಕನ್ನಡಿಗ ನಕಾಶ್ ಅಝೀಝ್..!! ಕೆಲವು ವರ್ಷಗಳ ಹಿಂದೆ ಜಿಲ್ಲೆಯಾದ್ಯಂತ ಪ್ರಸಿದ್ದಿ ಪಡೆದ ನೌಶದ್ ಆರ್ಕೆಸ್ಟ್ರಾ ತಂಡದ ಪರಿಚಯ ಇಲ್ಲ ಅಂತ ಹೇಳುವವರೇ ವಿರಳ..!! ಅಂದಿನ ಕಾಲದಲ್ಲಿ ಈ ನೌಶದ್ ಜೂ.ಕಿಶೋರ್ ಕುಮಾರ್ ಎಂದೇ ಪ್ರಸಿದ್ದಿ ..

Advertisement

ಈ ತಂಡದಲ್ಲಿ ಪಳಗಿ ಅದೆಷ್ಟೋ ವರ್ಷಗಳ ಕಾಲ ಆರ್ಕೆಸ್ಟ್ರಾ ತಂಡವನ್ನು ನಡಸಿ ನೌಶದ್ ಕುಟುಂಬ ಸಮೇತ ಮುಬೈನಲ್ಲಿ ನೆಲೆಸಿದರು. ಹನಿ ಹನಿ ಗೂಡಿ ಹಳ್ಳ ಎಂಬಂತೆ ಒಂದೊಂದೇ ಹೆಜ್ಜೆ ಮುಂದಿಟ್ಟರು.ಕರಾವಳಿಯಿಂದ ಮಾಯಾ ನಗರಿ ಮುಂಬೈ ಪಯಣ ಬೆಳೆಸಿದ ನಕಾಶ್ ಅಝೀಝ್ ಮುಂದೆ ಇಂಡಿಯನ್‌ ಐಡಲ್‌ ರಿಯಾಲಿಟಿ ಶೋನಲ್ಲೂ ಮಿಂಚಿದರು. ತನ್ನನು ತಾನೇ ತೊಡಗಿಸಿಕೊಂಡ ನಕಾಶ್ ಅದೆಸ್ಟೋ ಹಿಂದಿ ಚಿತ್ರದಲ್ಲಿ ಹಾಡಿದ್ದಾನೆ. ಯುವ ಮನವನ್ನು ಗೆದ್ದ ಕೊಕ್ ಟೈಲ್, ಬರ್ಫಿ, ವಿನೋದ್ ಏಜೆಂಟ್ ಅಲ್ಲದೆ ಇನ್ನಿತರ ಸಿನಿಮಾಗಳಲ್ಲಿ ಹಾಡಿದ ಹಿರಿಮೆ ಈ ಕನ್ನಡ ಕುವರನಿಗಿದೆ.

ಈತನ ಪ್ರತಿಯೊಂದು ಹಾಡು ಹಿಟ್ ಆಗಿದ್ದರೂ ಹಾಡಿವದರು ಯಾರೂ ಅಂತ ಯಾರಿಗೂ ಗೊತ್ತಿಲ್ಲ.. ಈತನ ಹಾಡು ಹಿಟ್ ಆಗುವಂತೆ ಎಲ್ಲಾ ಹಾಡುಗಳ ಕ್ರೆಡಿಟ್ ಮಾತ್ರ ಮಂಗ ಮಾಯವಾಗುತಿತ್ತು.. ಅದರೂ ಈ ನಕಾಶ್ ಸದ್ದಿಲ್ಲದೆ ಸುದ್ದಿಯಾಗಿದ್ದಾನೆ .. ಇದೀಗ ಯುವ ಪ್ರೇಮಿಗಳ ಮನ ಗೆದ್ದ ‘ಸಾರಿ ಕಾ ಫಾಲ್ಸ್’ ಹಾಡು ಈತನ ಅದೃಷ್ಟ ಬದಲಾಯಿಸಿತು. ಈತನ ಪ್ರತಿಭೆ ನೋಡಿ ಸಂಗೀತ ನಿರ್ದೇಶಕ ಪ್ರೀತಂ ತನ್ನ ಜೊತೆ ಕೆಲಸ ಮಾಡುವಂತೆ ಕರೆದರು. ಸಿಕ್ಕಿದ ಭಾಗ್ಯವನ್ನು ಕೈ ಬಿಡದೆ ಪ್ರೀತಂ ಅವರ ಒಂದಿಸ್ಟು ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡರು. ಅಲ್ಲಿಗೆ ಈತ ಕೊನೆಗೊಳಿಸಿಲ್ಲ ಮತ್ತಷ್ಟು ಬೆಳೆಯಬೇಕೆಂದು ಪಣತೊಟ್ಟ.

ಪ್ರೀತಂ ಅವರ ಚಿತ್ರದಲ್ಲಿ ಹಾಡಿರುವ ಸುಮಧುರ ಸಂಗೀತವನ್ನು ಕೇಳಿ ಸಂಗೀತ ಲೋಕದ ದಿಗ್ಗಜ ಎ ಆರ್ ರೆಹಮಾನ್ ಬೌಲ್ದ್ ಆದರು.. ನನಗೂ ಈತನಿಂದ ಹಾಡಿಸಬೇಕು ಎಂದ ಎ ಆರ್ ರೆಹಮಾನ್ ಕೂಡ ಆತನನ್ನು ತಮ್ಮ ಸಿನಿಮಾದಲ್ಲೂ ಹಾಡಿಸಿದರು.

ಇದೀಗ ನಮ್ಮೂರಿನ ಕರಾವಳಿ ಕನ್ನಡಿಗ ವಿಶ್ವವಿಖ್ಯಾತ ನಿರ್ದೇಶಕ ಸ್ಟೀವನ್‌ ಸ್ಪೀಲ್‌ಬರ್ಗ್‌ ಮತ್ತು ವಿಶ್ವ ಪ್ರಸಿದ್ಧ ಓಪ್ರಾ ವಿನ್‌ಫ್ರೆ ಸೇರಿ “ದಿ ಹಂಡ್ರೆಡ್‌ ಫ‌ೂಟ್‌ ಜರ್ನಿ’ ಎಂಬ ಸಿನಿಮಾವನ್ನು ನಿರ್ಮಿಸುವ ಚಿತ್ರಕ್ಕೆ ಸಂಗೀತ ನೀಡಲು ಮುಂದಾಗಿದ್ದಾನೆ. ಅದರೂ ಈ ಮಹಾ ನಿರ್ದೇಶಕ ಯಾರೂ ಎಂಬ ಪ್ರಶ್ನೆ..? ಅಂಗೈಯಲ್ಲಿ ಜಗತ್ತು.. ಎಂಬಂತೆ ಪುಟ್ಟ ಮಕ್ಕಳಿಂದ ವಯೋ ವೃದ್ದ ರವರೆಗೆ 1993 ರಲ್ಲಿ ಬಂದ ‘ಜುರಾಸಿಕ್ ಪಾರ್ಕ್’ ಸಿನಿಮಾವನ್ನು ಇಂದಿಗೂ ಯಾರೂ ಮರೆತಿಲ್ಲ.. ಈ ಮಹಾ ಸಿನಿಮಾದ ದಿಗ್ಗಜನೆ ನಕಾಶ್ ಹಾಡುವ ಸಿನಿಮಾದ ನಿರ್ದೇಶಕ ಸ್ಟೀವನ್‌ ಸ್ಪೀಲ್‌ಬರ್ಗ್‌.

Advertisement

ಈತ ನಿರ್ಮಿಸುವ ‘ದಿ ಹಂಡ್ರೆಡ್‌ ಫ‌ೂಟ್‌ ಜರ್ನಿ’ ಸಿನಿಮಾ ಕ್ಕೆ ಸಂಗೀತ ನೀಡುತ್ತಿರುವುದು ಸಂಗೀತ ಮಾಂತ್ರಿಕ ಎ ಆರ್‌ ರೆಹಮಾನ್‌. ಇಂಥ ಮಹಾ ಚಿತ್ರಕ್ಕೆ ಕನ್ನಡದ ಕಂಠವೊಂದು ಧ್ವನಿಯಾಗುವ ಮೂಲಕ ಮಂಗಳೂರು ಮೂಲದ ಕನ್ನಡಿಗನೊಬ್ಬ ಹಾಲಿವುಡ್‌ ಸಿನಿಮಾವೊಂದರಲ್ಲಿ ಹಾಡಿದ ಸಾಧನೆ ಮಾಡಿದ ಹೆಗ್ಗಳಿಕೆಗೆ ಸಲ್ಲುತ್ತದೆ.
ಅತೀ ಸಣ್ಣ ವಯಸ್ಸಿನಲ್ಲೇ ಕನ್ನಡದ ಕಂದ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರೂ ಕನ್ನಡ ನಂಟನ್ನು ಬಿಟ್ಟವನಲ್ಲ..

ಕನ್ನಡ ಚತ್ರ ರಂಗದ ಖ್ಯಾತ ಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ತಮಸ್ಸು’ ಚಿತ್ರದಲ್ಲಿ ‘ಮಾರ್ ಮಾರ್’ ಎಂಬ ಹಾಡಿಗೆ ಧ್ವನಿಗೂಡಿಸಿದ್ದಾನೆ, ಸ್ಟೈಲ್ ಕಿಂಗ್ ಉಪೇಂದ್ರ ಅಭಿನಯದ ‘ಬ್ರಹ್ಮ’ ಚಿತ್ರಕ್ಕೂ ಈ ನಕಾಶ್ ಹಾಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾನೆ. ದಕ್ಷಿಣ ಕನ್ನಡದ ಮೂಡಬಿದ್ರಿಯಲ್ಲಿ ಜನಿಸಿದ ನಕಾಶ್ ಇದೀಗ ಕುಟುಂಬ ಸಮೇತ ಮುಂಬೈನಲ್ಲಿ ನೆಲೆಸಿದ್ದಾರೆ.

ಬರಹ – ಅನ್ಸಾರ್ ಬೆಳ್ಳಾರೆ

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅಕುಲ್ ಕಮಿಲ
July 1, 2025
1:58 PM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:36 PM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:26 PM
by: ದ ರೂರಲ್ ಮಿರರ್.ಕಾಂ
ನಿತ್ಯ ಜಂಜಡದ ನಡುವೆ……… ಉಪ್ಪಿನಕಾಯಿಯ ಚಿಂತೆ..!
June 30, 2025
6:53 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group