ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”

March 7, 2026
10:14 PM
ಸಾಂಪ್ರದಾಯಿಕ ಗ್ರಾಮೀಣ ತಿನಿಸು ಉಪ್ಪು ಸೊಳೆ ಬೋಳು ಬೆಂದಿ. ಸರಳ ಪದಾರ್ಥಗಳಿಂದ ಸುಲಭವಾಗಿ ಮನೆಯಲ್ಲೇ ಮಾಡುವ ಈ ರೆಸಿಪಿ ಬಿಸಿ ಅನ್ನಕ್ಕೆ ಅತ್ಯುತ್ತಮ ಜೊತೆಯಾಗುತ್ತದೆ.

ಬಿಸಿ ಬಿಸಿ ಅನ್ನಕ್ಕೆ ಸರಳವಾದ ಆದರೆ ರುಚಿಕರವಾದ ಪದಾರ್ಥಗಳು ಬೇಕು. ಅಂತಹ ಸಾಂಪ್ರದಾಯಿಕ ಊಟಗಳಲ್ಲಿ ಒಂದೇ ಉಪ್ಪು ಸೊಳೆ ಬೋಳು ಬೆಂದಿ.
ಸ್ವಲ್ಪ ಹುಳಿ, ಸಿಹಿ ಹಾಗೂ ಖಾರದ ಮಿಶ್ರಣ ಹೊಂದಿರುವ ಈ ತಿನಿಸು ಗ್ರಾಮೀಣ ಅಡುಗೆ ಸಂಸ್ಕೃತಿಯ ರುಚಿಯನ್ನು ನೆನಪಿಸುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಹಾಕಿ ಈ ಬೋಳು ಬೆಂದಿ ಜೊತೆ ತಿಂದರೆ ಅದರ ಸವಿಯೇ ವಿಭಿನ್ನ.

ಬೇಕಾಗುವ ಸಾಮಗ್ರಿಗಳು:

  • ಉಪ್ಪು ಸೊಳೆ – ½ ಕಪ್

  • ಬೆಲ್ಲ – ರುಚಿಗೆ ತಕ್ಕಷ್ಟು

  • ಮೆಣಸಿನ ಪುಡಿ – 1½ ಚಮಚ

  • ಹುಣಸೆ ರಸ – ¼ ಕಪ್

  • ಎಣ್ಣೆ – 2 ಚಮಚ

  • ಸಾಸಿವೆ – ½ ಚಮಚ

  • ಬೆಳ್ಳುಳ್ಳಿ – ಕೆಲವು ಕಾಳು

  • ಒಣ ಕೆಂಪು ಮೆಣಸು – 2

  • ಕರಿಬೇವಿನ ಎಲೆ – ಸ್ವಲ್ಪ

  • ನೀರು – ಅಗತ್ಯವಿದ್ದಷ್ಟು

ಮಾಡುವ ವಿಧಾನ :  ಮೊದಲು ಉಪ್ಪು ಸೊಳೆಯನ್ನು ಸುಮಾರು ಒಂದು ಗಂಟೆ ಬಿಸಿ ನೀರಿನಲ್ಲಿ ನೆನೆಸಿಡಬೇಕು. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಬೇಯಿಸಬೇಕು. ಬೇಯಿಸಿದ ಸೊಳೆಯನ್ನು ನಂತರ ತರಿ ತರಿಯಾಗಿ ರುಬ್ಬಿ.

ಇದಾದ ಬಳಿಕ ಬಾಣಲೆಗೆ ರುಬ್ಬಿದ ಮಿಶ್ರಣ ಹಾಕಿ ಅದಕ್ಕೆ ಸ್ವಲ್ಪ ನೀರು, ಬೆಲ್ಲ, ಮೆಣಸಿನ ಪುಡಿ ಹಾಗೂ ಹುಣಸೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಬೇಕು. ಕುದಿದ ಬಳಿಕ ಸ್ಟವ್ ಆಫ್ ಮಾಡಬೇಕು.

ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಬೆಳ್ಳುಳ್ಳಿ, ಒಣ ಕೆಂಪು ಮೆಣಸು ಹಾಗೂ ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಬೇಕು. ಈ ಒಗ್ಗರಣೆಯನ್ನು ಬೋಳು ಬೆಂದಿಗೆ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಗಮನಿಸಿ: ಉಪ್ಪು ಸೊಳೆಯಲ್ಲಿ ಈಗಾಗಲೇ ಉಪ್ಪು ಇರುವುದರಿಂದ ಹೆಚ್ಚುವರಿ ಉಪ್ಪು ಹಾಕುವ ಅಗತ್ಯವಿಲ್ಲ.  ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ ಈ ಬೋಳು ಬೆಂದಿ ಜೊತೆ ತಿಂದರೆ ಊಟದ ಸವಿ ದ್ವಿಗುಣವಾಗುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror