ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

August 5, 2026
9:09 AM
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು ರಾಘವೇಶ್ವರ ಶ್ರೀ ಹೇಳಿದರು. ದೇಹದ ಸಹಜ ಕ್ರಮವನ್ನು ಗೌರವಿಸಿ, ದಾಹವಾದಾಗ ಮಾತ್ರ ನೀರು ಕುಡಿಯುವಂತೆ ಅವರು ಸಲಹೆ ನೀಡಿದರು.

ಅಕಾಲದಲ್ಲಿ ಹಸಿವಾಗುವುದು ಅಥವಾ ಅಸಮಯದಲ್ಲಿ ನಿದ್ದೆ ಬರುವುದು ದೇಹದ ಸಹಜ ವ್ಯವಸ್ಥೆ ಹದಗೆಟ್ಟಿರುವ ಲಕ್ಷಣವಾಗಿದೆ. ದೇಹದ ಯಂತ್ರವನ್ನು ಕೃತಕವಾಗಿ ಬದಲಾಯಿಸಲು ಹೋಗದೆ, ಜೀವನಕ್ರಮವನ್ನು ಸರಿಪಡಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದ ಅವರು, ದೇಹದ ಸಹಜ ಕ್ರಮದಲ್ಲಿ ಕೃತಕ ಹಸ್ತಕ್ಷೇಪ ಮಾಡುವುದು ವಿರುದ್ಧ ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಿದರು.

ದೇಹದ ಸಹಜ ವೇಗಗಳನ್ನು ತಡೆಯಬೇಡಿ :  ಮಲ, ಮೂತ್ರ ಸೇರಿದಂತೆ ದೇಹದ ಸಹಜ ವೇಗಗಳನ್ನು ತಡೆಹಿಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಧಾರ್ಮಿಕ ಆಚರಣೆಗಳ ಹೆಸರಲ್ಲಿಯೂ ಇಂತಹ ವೇಗಗಳನ್ನು ತಡೆದು ಪೂಜೆ-ಪಾರಾಯಣ ಮಾಡುವುದು ಸಮಂಜಸವಲ್ಲ. ಆದರೆ ದುರಾಸೆ, ದ್ವೇಷ, ಸಿಟ್ಟು, ದುರಭಿಮಾನ, ಲಜ್ಜೆ ಮೊದಲಾದ ಮನಸ್ಸಿನ ದುಷ್ಟ ಪ್ರವೃತ್ತಿಗಳನ್ನು ಮಾತ್ರ ನಿಯಂತ್ರಿಸುವುದು ಜೀವನಕ್ಕೆ ಹಿತಕರ ಎಂದು ಹೇಳಿದರು.

ಸರಿಯಾದ ನಿದ್ದೆ ಆರೋಗ್ಯಕ್ಕೂ, ಆಧ್ಯಾತ್ಮಿಕ ಜೀವನಕ್ಕೂ ಅಗತ್ಯ : ಅತಿಯಾದ ನಿದ್ದೆ ಹಾಗೂ ನಿದ್ರಾಹೀನತೆ ಎರಡೂ ಮಾನವನ ಆರೋಗ್ಯ ಮತ್ತು ಆಯುಷ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಆಧುನಿಕ ವಿಜ್ಞಾನವೂ ಹೇಳುತ್ತದೆ. ಆಯುರ್ವೇದವೂ ಸಹ ಅಧಿಕ ನಿದ್ದೆ ಆಯಸ್ಸು ಮತ್ತು ಆರೋಗ್ಯಕ್ಕೆ ಒಳಿತಲ್ಲ ಎಂದು ತಿಳಿಸುತ್ತದೆ. ಸಮಪ್ರಮಾಣದ ನಿದ್ದೆ ಪರಮಾತ್ಮನ ದರ್ಶನಕ್ಕೆ ಹೆದ್ದಾರಿಯಂತಿದೆ ಎಂದು ಭಾರತೀಯ ಶಾಸ್ತ್ರಗಳು ತಿಳಿಸಿವೆ ಎಂದು ಶ್ರೀಗಳು ಹೇಳಿದರು.

‘ಹೃದಯ ಕಮಲ’ ಮತ್ತು ಹೃದಯ ಬೇರೆಬೇರೆ : ಶಾಸ್ತ್ರಗಳಲ್ಲಿ ಉಲ್ಲೇಖವಾಗುವ ‘ಹೃದಯ ಕಮಲ’ ದೇಹದಲ್ಲಿರುವ ಹೃದಯ ಅಂಗಕ್ಕಿಂತ ಭಿನ್ನವಾಗಿದೆ. ಎದೆಗುಂಡಿಗೆಯ ಹಿಂಭಾಗದಲ್ಲಿರುವ ತೇಜೋಮಯ ಕೇಂದ್ರವನ್ನೇ ಹೃದಯ ಕಮಲ ಅಥವಾ ಅನಾಹತ ಚಕ್ರ ಎಂದು ಯೋಗಶಾಸ್ತ್ರ ವಿವರಿಸುತ್ತದೆ. ನಿದ್ದೆಯ ಸಮಯದಲ್ಲಿ ಇದು ಮುದುಗುತ್ತದೆ, ಜಾಗೃತ ಸ್ಥಿತಿಯಲ್ಲಿ ಅರೆ ಅರಳಿರುತ್ತದೆ ಮತ್ತು ಸತ್ವಗುಣ ಪ್ರಾಬಲ್ಯ ಹೊಂದಿದ ಜ್ಞಾನಿಗಳಲ್ಲಿ ಸಂಪೂರ್ಣ ಅರಳುತ್ತದೆ ಎಂದು ಅವರು ವಿವರಿಸಿದರು.

ಗೂಗಲ್ ನೋಡಿ ನೀರು ಕುಡಿಯಬೇಡಿ! : ಇತ್ತೀಚಿನ ದಿನಗಳಲ್ಲಿ ಗೂಗಲ್ ಅಥವಾ ಸಾಮಾಜಿಕ ಜಾಲತಾಣಗಳ ಸಲಹೆ ನೋಡಿ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ದೇಹಕ್ಕೆ ಎಷ್ಟು ನೀರು ಬೇಕು ಎಂಬುದನ್ನು ದೇಹವೇ ಬಾಯಾರಿಕೆಯ ಮೂಲಕ ತಿಳಿಸುತ್ತದೆ. ದೇಹದ ಸೂಚನೆಯಂತೆ ನೀರು ಕುಡಿಯಬೇಕು. ಅತಿಯಾದ ನೀರಿನ ಸೇವನೆಯೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಶ್ರೀಗಳು ಸಲಹೆ ನೀಡಿದರು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Jagadguru Shankaracharya Sri Raghaveshwara Bharathi Swamiji said that irregular hunger and untimely sleep are signs of an unhealthy body system. Speaking at the Annam Brahma discourse during the Annabrahma Chaturmasya at Gokarna, he stressed living in tune with the body’s natural rhythms, avoiding unnecessary artificial interventions, maintaining balanced sleep, and drinking water according to the body’s thirst rather than following internet advice.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror