ಹಿಂದೂಗಳ ಹಬ್ಬವನ್ನು ಟೀಕಿಸಿದ ಸತೀಶ ಜಾರಕಿಹೊಳಿಯವರು ಕ್ಷಮೆಯಾಚನೆ ಮಾಡಬೇಕು – ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

July 24, 2020
10:50 AM
ಮಂಗಳೂರು: ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವ ಸಂಪ್ರದಾಯವನ್ನು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಟೀಕಿಸಿದ್ದು ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.
ನಾಗದೇವರಿಗೆ ಹಾಲನ್ನು ಎರೆಯುವುದು ಅವೈಜ್ಞಾನಿಕ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಹಾಗಾಗಿ ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಿ ಎಂದು  ಕರೆ ನೀಡುವ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ, ನಾಗನಿಗೆ ಹಾಲು ಎರೆಯವ ಬದಲು, ಬಡಮಕ್ಕಳಿಗೆ ಹಾಲು ನೀಡಿ ಎಂದು ಕರೆ ನೀಡಿದ್ದಾರೆ. ಇದು ಇವರ ಹಿಂದೂಗಳ ಧಾರ್ಮಿಕ ಹಬ್ಬಗಳ ಹಿಂದಿರುವ ಶಾಸ್ತ್ರವನ್ನು ಅರಿತುಕೊಳ್ಳದೇ ಹಿಂದುಗಳ ಹಬ್ಬದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಮೋಹನ ಗೌಡ ಹೇಳಿದ್ದಾರೆ.

ಶಿವಲಿಂಗಕ್ಕೆ ಹಾಲು ಅರ್ಪಿಸಬೇಡಿ ಮಕ್ಕಳಿಗೆ ನೀಡಿ ಹೇಳುವವರು, ಹಾಲಿನ ಬೆಲೆ ಹೆಚ್ಚಿಸಲು ಪ್ರತಿಭಟನೆ ಹೆಸರಿನಲ್ಲಿ ಲಕ್ಷಗಟ್ಟಲೆ ಲೀಟರ್ ಹಾಲು ಬೀದಿಯಲ್ಲಿ ಸುರಿಯುವಾಗ ಯಾಕೆ ಮೌನವಾಗಿದ್ದರು? ಅದಲ್ಲದೇ  ಶೇಕಡಾ 80 ರಷ್ಟು ಹಾಲನ್ನು ಕಲಬೆರಕೆ ಮಾಡಿ ಮಾರಾಟ ಮಾಡುವ ಮೂಲಕ ಲಕ್ಷಾಂತರ ಮಕ್ಕಳ ಜೀವನ ಹಾಳು ಮಾಡುವ ಸಮಸ್ಯೆಯ ಬಗ್ಗೆ ಯಾಕೆ ಮೌನ ?  ಎಂದು ಪ್ರಶ್ನಿಸಿದ ಮೋಹನ್‌ ಗೌಡ ಭಾರತೀಯ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕನ್ನು ನೀಡಿದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ’ , ಅಪೌಷ್ಟಿಕತೆಯಿಂದ ಸಾಯುತ್ತಿರುವ ಬಡ ಮಕ್ಕಳಿಗೆ ಹಾಲು ಸಿಗದಿರಲು ಸರ್ಕಾರ ಅವರಿಗೆ ಸರಿಯಾದ ಸೌಲಭ್ಯ ಮತ್ತು ಪರಿಹಾರಗಳ ತಲುಪದಿರುವುದರ ಪರಿಣಾಮವಾಗಿದೆ. ಈ ರೀತಿ ಮೂಲ ಸಮಸ್ಯೆಯನ್ನು ಪರಿಹರಿಸದೆ ಕೇವಲ ಮೇಲುಮೇಲಿನ ಉಪಾಯವೆಂದು ನಾಗಪಂಚಮಿ ಅಥವಾ ಮಹಾಶಿವರಾತ್ರಿಯ ಕೇವಲ ಒಂದು ದಿನದ ಹಾಲನ್ನು ನೀಡುವ ಮೂಲಕ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಬಹುದೇ? ಎಂದು ಮೋಹನ್‌ ಗೌಡ ಪ್ರಶ್ನಿಸಿದ್ದಾರೆ.

 
ಇಂದು, ಹಿಂದೂ ಧರ್ಮ, ಸಂಪ್ರದಾಯಗಳು ಮತ್ತು ಹಬ್ಬಗಳ ಮೇಲೆ ಕೆಸರೆರಚಿ ಖ್ಯಾತಿ ಪಡೆಯುವುದು ಫ್ಯಾಷನ್ ಆಗಿದೆ. ಹೀಗೆ ಹೇಳುವವರು ಬಕ್ರಿದ್ ಮತ್ತು ಇತರ ಧರ್ಮಗಳಿಗೆ ಏಕೆ ಮಾರ್ಗದರ್ಶನ ಮಾಡುವುದಿಲ್ಲ? ಹಿಂದೂಗಳು ಸಹಿಷ್ಣುರು, ಆದ್ದರಿಂದ ಅವರನ್ನು ಸಾಫ್ಟ್ ಟಾರ್ಗೆಟ್ ಮಾಡಲಾಗುತ್ತದೆ. ಎಲ್ಲ ಹಿಂದೂಗಳು ಇದನ್ನು ಸಂವಿಧಾನದ ಮಾರ್ಗದಿಂದ ಈ ಹೇಳಿಕೆಯನ್ನು ಬಲವಾಗಿ ವಿರೋಧಿಸುವುದು ಅವಶ್ಯಕ ಸತೀಶ ಜಾರಕಿಹೊಳಿ ಅವರು ಈ ಹೇಳಿಕೆ ಬಗ್ಗೆ ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಮೋಹನ್‌ ಗೌಡ ಒತ್ತಾಯಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೋಹಿತ್‌ ನಗರ್‌ ಅಡಿಕೆ ಗಿಡ ಏಕೆ ರೈತರ ಫೇವರಿಟ್‌..? ಹೆಚ್ಚು ಇಳುವರಿ, ವೇಗದ ಬೆಳವಣಿಗೆ ಇದರ ವಿಶೇಷತೆ..!
May 19, 2026
11:25 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-05-2026 | ಕರಾವಳಿಯಲ್ಲಿ ಮಳೆ ಕ್ಷೀಣಿಸುವ ಲಕ್ಷಣ – ಮೇ 27ರ ಸುಮಾರಿಗೆ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ
May 19, 2026
3:00 PM
by: ಸಾಯಿಶೇಖರ್ ಕರಿಕಳ
“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ
May 18, 2026
10:14 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!
May 18, 2026
8:11 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror