ಹಿಂ ಜಾ ವೇ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Advertisement

ಸವಣೂರು : ಸವಣೂರು ಚಂದ್ರನಾಥ ಬಸದಿಯ ಪ್ರಿಯಕಾರಿಣಿ ಸಭಾಭವನದಲ್ಲಿ ಸವಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ  ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ನಡೆಯಿತು.

Advertisement

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡ ರಾಜೇಶ್ ಶೆಟ್ಟಿ ಮೇನಾಲ ,ದೇಶದ ಆತ್ಮವೇ ಆಧ್ಯಾತ್ಮ . ದೇಶದಲ್ಲಿನ ಸಂಸ್ಕಾರ, ಸಂಸ್ಕೃತಿ ಬೇರೆ ಎಲ್ಲೂ ಕಾಣಸಿಗದು. ಸ್ವಾಮಿ ವಿವೇಕಾನಂದರ ಅಮೇರಿಕಾ ಪ್ರವಾಸದ ಬಳಿಕ ದೇಶದ ಮೌಲ್ಯಗಳು ವಿಶ್ವವ್ಯಾಪಿಯಾಯಿತು. ಇಂತಹ ಕಾರ್ಯಕ್ರಮದಲ್ಲಿ ಯುವ ಜನತೆ ಹೆಚ್ಚಾಗಿ ಪಾಲ್ಗೊಂಡು ನಮ್ಮ ಹಿರಿಯರು ಪಾಲಿಸಿಕೊಂಡ ಬಂದ ಆಚರಣೆಗಳು ಪದ್ದತಿಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಮಾತನಾಡಿ,  ಧರ್ಮದ ಹಾದಿಯಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ. ಕ್ಷಣಿಕ ಸುಖಕ್ಕಿಂತಲೂ ಆತ್ಮ ಶುದ್ದಿಯಿಂದ ಮಾಡುವ ಕಾರ್ಯಗಳಿಂದ ಸಿಗುವ ಸುಖ ಶ್ರೇಷ್ಠವಾದದು ಎಂದರು.

Advertisement

ಜನಜಾಗೃತಿ ವೇದಿಕೆಯ ಸವಣೂರು ವಲಯಾಧ್ಯಕ್ಷ  ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ  ತಾರಾನಾಥ ಕಾಯರ್ಗ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ , ಸವಣೂರು ಹಿಂ.ಜಾ.ವೇಯ ಕಾರ್ಯದರ್ಶಿ ಸಚಿನ್ ಕೋಟ್ಯಾನ್ ಮಡಕೆ ಉಪಸ್ಥಿತರಿದ್ದರು.
ಅರ್ಚಕ ಎಸ್.ಗೋಪಾಲಕೃಷ್ಣ ಬಡಕಿಲ್ಲಾಯ ಅವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.
ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಪ್ರಸ್ತಾವಿಸಿದರು. ಅಧ್ಯಕ್ಷ ಜನಾರ್ಧನ  ಪಂಜ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಜಗದೀಶ್ ಕೆಡೆಂಜಿ ವಂದಿಸಿದರು. ಪ್ರವೀಣ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಹಿಂ ಜಾ ವೇ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ"

Leave a comment

Your email address will not be published.


*